ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಸರ ರಕ್ಷಣೆ ಜಾಗೃತಿ ಅವಶ್ಯ: ವರ್ಗೀಸ್

Rashmi Kasaragodu
Updated On : 11 Feb 2014, 1:48 am

ತರೀಕೆರೆ: ಮಣ್ಣು, ನೀರು. ಪರಿಸರ ಮತ್ತು ಅರಣ್ಯ ರಕ್ಷಿಸುವ ವಿಚಾರಗಳ ಬಗ್ಗೆ ಸಮಾಜದಲ್ಲಿ ಅತಿ ಹೆಚ್ಚು ಜಾಗೃತಿ ಮೂಡಿಸುವಂತಹ ಕೆಲಸ ಆಗಬೇಕಿದೆ ಎಂದು ತರೀಕೆರೆ ವಿಕಸನ ಸಂಸ್ಥೆ ಯೋಜನಾ ನಿರ್ದೇಶಕ ಎ.ಎಂ.ವರ್ಗೀಸ್ ಕ್ಲೀಟಸ್ ತಿಳಿಸಿದ್ದಾರೆ.
ಇಲ್ಲಿಗೆ ಸಮೀಪದ ಕೆ.ಚಟ್ಟನಹಳ್ಳಿ ವಿಕಸನ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದ ಆವರಣದಲ್ಲಿ ವಿಕಸನ ಸಂಸ್ಥೆಯಿಂದ ಏರ್ಪಡಿಸಿದ್ದ ಸಂಸ್ಥೆಯ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗೃತಿ ಮೂಡಿಸುವ ಕಾರ್ಯ:  ಸಂಸ್ಥೆಯು ಇಲ್ಲಿಯವರೆಗೆ ಜನರಿಗೆ ಮತ್ತು ಗ್ರಾಮಗಳಿಗೆ ಉತ್ತಮ ಸೇವೆ ಮಾಡುತ್ತ ಬಂದಿದೆ. ಮುಂದಿನ ದಿನಗಳಲ್ಲಿ ವೃದ್ಧರು, ಅಬಲೆಯರು, ವಿಧವೆಯರು, ನೊಂದವರ ಕುರಿತು ಸೇವೆ ಮಾಡಲು ಸನ್ನದ್ಧವಾಗಿದೆ.
ಮಹಿಳಾ ದೌರ್ಜನ್ಯ, ಬಾಲ್ಯವಿವಾಹ ತಡೆಗಟ್ಟುವುದು, ಭ್ರಷ್ಟತೆ ಹೆಣ್ಣು ಭ್ರೂಣ ಹತ್ಯೆ ಇಂತಹ ಸಾಮಾಜಿಕ ಪಿಡುಗುಗಳನ್ನು ಹತ್ತಿಕ್ಕುವ ಕಾರ್ಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿಸಿದರು.
ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ ಅವರು ಮಾತನಾಡಿ, ಸಮಾಜದ ಅಭಿವೃದ್ಧಿಗೆ ಇಂತಹ ಸಂಸ್ಥೆಗಳು ಅಗತ್ಯ ಎಂದರು.
ಹಣ್ಣೇ ಹಿರೇಮಠ ಶ್ರೀಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್. ವೀರಭದ್ರಪ್ಪ, ವಕೀಲರಾದ ಎಸ್.ಸುರೇಶ್ ಚಂದ್ರ, ತೇಜಮೂರ್ತಿ, ಸಂಸ್ಥೆ ಅಡಳಿಡ ಮಂಡಳಿ ಕಾರ್ಯದರ್ಶಿ ಎಂ. ನಾಗರಾಜ್, ಶ್ರೀನಿವಾಸ್ ಎಲ್. ಮುಕುಂದ್, ಡಿ.ಕೆ. ಸಂತೋಷ್, ಕನ್ನಡಶ್ರೀ ಬಿ.ಎಸ್. ಭಗವಾನ್, ಗ್ರಾಮಸ್ಥರು, ಸಂಸ್ಥೆ ಸಿಬ್ಬಂದಿ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರ, ನಾಟಿ ಔಷಧಿ, ಸಮಾಜ ಸೇವೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement