ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಕ್ಕಳಲ್ಲಿ ಪೋಷಕರು ಕ್ರೀಡಾಸ್ಫೂರ್ತಿ ತುಂಬಲಿ

Rashmi Kasaragodu
Updated On : 11 Feb 2014, 1:48 am

ಚಿಕ್ಕಮಗಳೂರು: ಕ್ರೀಡೆಯಲ್ಲಿ ಯಶಸ್ವಿ ಆಗಬೇಕಾದರೆ ಪೋಷಕರ ಪ್ರೋತ್ಸಾಹ ಅಗತ್ಯ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕವಾಗಿ ಅತ್ಯಂತ ಕ್ರಿಯಾಶೀಲರಾಗಿ ಆರೋಗ್ಯವಾಗಿರಬಹುದು ಎಂದು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಾಜಿ ಆಟಗಾರರಾದ ಡೇವಿಡ್ ಜಾನ್ಸನ್ ಹೇಳಿದ್ದಾರೆ.
ನಗರದ ಜ್ಯೋತಿನಗರದ ಚಿಕ್ಕಮಗಳೂರು ಷಟಲ್ ಬ್ಯಾಡ್ಮಿಂಟನ್ ಕ್ಲಬ್‌ನಲ್ಲಿ 7ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯು ಕ್ರಿಕೆಟ್‌ಗೆ ಸರಿಸಮನಾಗಿ ಬೆಳೆಯುತ್ತಿದೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಒಲಿಂಪಿಕ್ಸ್, ಕಾಮನ್ ವೆಲ್ತ್ ಕ್ರೀಡೆಗಳಲ್ಲೂ ಭಾರತದ ಆಟಗಾರರು ಗೆದ್ದು ಇತರೆ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಸೋಲು- ಗೆಲವು ಮುಖ್ಯವಲ್ಲ:  ಚಿಕ್ಕಮಗಳೂರು ಷಟಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ಪ್ರಭಾಕರ್ ಮಾತನಾಡಿ, ಅತ್ಯಂತ ಯಶಸ್ವಿಯಾಗಿ 7 ವರ್ಷ ಪಂದ್ಯಾವಳಿಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಈಗ ಹೊಸ ಶಕ್ತಿಯಾಗಿ ಉದಯಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಅದ್ಭುತ ಸಾಧನೆಗಳನ್ನು ಯುವ ಕ್ರೀಡಾಪಟುಗಳು ತೋರುತ್ತಿದ್ದಾರೆ. ಇದರಿಂದ ಅನೇಕ ಯುವ ಕ್ರೀಡಾಪಟುಗಳಿಗೆ ಸಾಧನೆ ಮಾಡುವ ಛಲ ಬರುತ್ತದೆ ಎಂದು ತಿಳಿಸಿದರು.
ಟೂರ್ನಮೆಂಟ್‌ನಲ್ಲಿ “G’ ಗುಂಪಿನಲ್ಲಿ ಮೆಸ್ಕಾಂ ಇಲಾಖೆಯ ವೀರೇಶ್ ಮತ್ತು ದೇವರಾಜ್ ಪ್ರಥಮ, ದ್ವಿತೀಯ ಸ್ಥಾನವನ್ನು ನೀರಜ್ ಮತ್ತು ಪ್ರಕಾಶ್ ಪಡೆದಿದ್ದಾರೆ. “¸’ ಗುಂಪಿನಲ್ಲಿ ಪ್ರಥಮ ಸ್ಥಾನವನ್ನು ಅನ್ಸರ್ ಮತ್ತು ಖಾತಿಬ್ ಗಳಿಸಿದ್ದಾರೆ. ದ್ವಿತೀಯ ಬಹುಮಾನವನ್ನು ಕುಲದೀಪ್ ಮತ್ತು ವೆಂಕಟೇಶ್ ಪಡೆದುಕೊಂಡರು.
ಈ ಸಂದರ್ಭ ಪ್ರಶಾಂತ್, ಉದಯಕುಮಾರ್, ಸುದೀಪ್ ಉಪಸ್ಥಿತರಿದ್ದರು. ವೇಲಪ್ಪನ್ ಸ್ವಾಗತಿಸಿ, ಶಿವಪ್ರಕಾಶ್ ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement