ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ರಾಜಕಾರಣದಲ್ಲಿ ಮಹಿಳೆಗೆ ಆದ್ಯತೆ ಅವಶ್ಯ'

Rashmi Kasaragodu
Updated On : 11 Feb 2014, 1:47 am

ನರಸಿಂಹರಾಜಪುರ: ಹೆಣ್ಣು ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ಪುರುಷರು ಸಹಕಾರ ನೀಡಬೇಕು ಎಂದು ವಿಪ ಸದಸ್ಯೆ ಮೋಟಮ್ಮ ಮನವಿ ಮಾಡಿದರು.
ಇಲ್ಲಿನ ಸಹರಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬ್ಯಾರೀಶ್ ವಿದ್ಯಾಸಂಸ್ಥೆಯ ಆದರ್ಶ ಕಿರಿಯ ಪ್ರಾಥಮಿಕ ಶಾಲೆಯ 7ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೋಟಮ್ಮ ಅವರು ಡಾಕ್ಟರೇಟ್ ಪಡೆದ ಹಿನ್ನೆಲೆ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಟಮ್ಮ, ನನಗೆ ಡಾಕ್ಟರೇಟ್ ಸಿಕ್ಕಿರುವುದಕ್ಕೆ ಸಂತಸವಾಗಿದೆ. ನಾನು ಇಷ್ಚು ಎತ್ತರಕ್ಕೆ ಬೆಳೆಯಲು ಸೋನಿಯಾ ಗಾಂಧಿ, ಎಸ್.ಎಂ. ಕೃಷ್ಣ ಹಾಗೂ ನನ್ನ ಅಭಿಮಾನಿಗಳೇ ಕಾರಣವಾಗಿದ್ದಾರೆ. ಡಾಕ್ಟರೇಟ್ ಗೌರವವನ್ನು ಅವರಿಗೆ ಅರ್ಪಿಸುತ್ತೇನೆ ಎಂದರು.
ಕನಸು ಬಿತ್ತಿ:  ಪೋಷಕರು ಮಕ್ಕಳಲ್ಲಿ ಒಳ್ಳೆಯ ಕನಸು ಬಿತ್ತಬೇಕು. ಇದರಿಂದ ಮಕ್ಕಳು ದುಷ್ಟರ ಕೈಗೆ ಸಿಕ್ಕಿ ಸಮಾಜ ಘಾತಕರಾಗುವುದು ತಪ್ಪುತ್ತದೆ. ಮಕ್ಕಳಿಗೆ ಒಳ್ಳೆಯ ಮೌಲ್ಯವನ್ನು ಕಲಿಸಬೇಕು. ಪೋಷಕರು ಮಕ್ಕಳಿಗೆ ಏಕತೆ ಬೋಧಿಸಬೇಕು. ಸಿನಿಮಾ ಹಾಡುಗಳ ನೃತ್ಯವನ್ನು ಕಡಿಮೆ ಮಾಡಿ ಗ್ರಾಮೀಣ ಭಾಗದಲ್ಲಿ ಈಗಲೂ ಜೀವಂತವಾಗಿರುವ ಜಾನಪದ ಹಾಡು, ನೃತ್ಯವನ್ನು ಕಲಿಸಬೇಕು ಎಂದು ಹೇಳಿದರು.
ಭರವಸೆ:  ಸಮಾರಂಭವನ್ನು ಉದ್ಘಾಟಿಸಿದ ಜಿಪಂ ಮಾಜಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಯಾವುದೇ ಶುಲ್ಕ ಪಡೆಯದೆ ಆದರ್ಶ ಕಿರಿಯ ಪ್ರಾಥಮಿಕ ಶಾಲೆಯು ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಾಗಿದೆ ಎಂದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎ. ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಸುಜಾತ, ಮಡಬೂರಿನ ಕೃಷಿಕರಾದ ಎಂ.ಬಿ.ವನಮಾಲಮ್ಮ, ಮಾಜಿ ಜಿಪಂ ಸದಸ್ಯ ಬಿ.ಎಸ್. ಸುಬ್ರಮಣ್ಯ, ಪಪಂ ಸದಸ್ಯರಾದ ಲಕ್ಷ್ಮಣ ಶೆಟ್ಟಿ, ಸುನೀಲಕುಮಾರ್, ಸಮೀರಾ ನಹೀಂ, ವಕೀಲ ಇ.ಸಿ.ಜೋಯಿ, ರಾಜ್ಯ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಎನ್.ಎ.ಶೇಖಬ್ಬ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement