ಸರ್ಕಾರದಿಂದ ರೈತ ವಿರೋಧಿ ಧೋರಣೆ
ಬೆಂಗಳೂರು: ಚಿಕ್ಕಮಗಳೂರು ಕಳಸ ಇನಾಂ ಭೂಮಿ ಹೋರಾಟದಲ್ಲಿ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ತಾಳುತ್ತಿದೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ. ಇನಾಂ ಭೂಮಿ ತೆರವು ಕಾರ್ಯಾಚರಣೆಯಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇನಾಂ ಭೂಮಿ ರಕ್ಷಣೆಯಲ್ಲಿ ಸರ್ಕಾರಕ್ಕೆ ಪತ್ರ ಬರೆದು ರೈತರ ಹಿತ ಕಾಯಲು ಒತ್ತಾಯಿಸಿದ್ದರು. ಆದರೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪತ್ರಿಕಾಗೋಷ್ಠಿ ಮಂಗಳವಾರ ದೂರಿದರು. ಕಳಸದಲ್ಲಿ ಇನಾಂ ಭೂಮಿ ಮೇಲೆ ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ರಾಜ್ಯ ಸರ್ಕಾರ ರೈತರ ರಕ್ಷಣೆಗೆ ವಿಫಲವಾದಲ್ಲಿ ಕಸದ ಇನಾಂ ಭೂಮಿ ಹೋರಾಟವನ್ನು ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ತೀವ್ರಗೊಳಿಸಲಾಗುತ್ತದೆ ಎಂದು ರಮೇಶ್ಬಾಬು ಎಚ್ಚರಿಸಿದರು.