ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿವೇಕಾನಾಂದ ಜಯಂತಿ ಆಚರಣೆ

Rashmi Kasaragodu
Updated On : 13 Feb 2014, 11:43 am

ತರೀಕೆರೆ: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಶ್ರೇಷ್ಠತೆ ಮತ್ತು ಸಂಸ್ಕೃತಿಯನ್ನು ಪಾಶ್ಚಾತ್ಯರಿಗೆ ತಿಳಿಸಿದರು ಎಂದು ಪಟ್ಟಣದ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಮ್ಮ ತಿಳಿಸಿದ್ದಾರೆ.
ಇನ್ನರ್‌ವೀಲ್ ಕ್ಲಬ್ ವತಿಯಿಂದ ರೋಟರಿ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕನಾಂದರ ಜಯಂತಿ ಮತ್ತು ಯುವ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಅದನ್ನು ಬಿಟ್ಟು ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದರು.
ಶಾರದ ಸತ್ಸಂಗದ ಶಾಂತ ರೇವಣ್ಣ ಮಾತನಾಡಿ, ವಿವೇಕಾನಂದರು ದೇಶಭಕ್ತ ಸಂತರು, ವೀರಪುರುಷರು ಎಂದ ಅವರು, ಸ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಯುವ ಪ್ರತಿಭೆಗಳಾದ ಸಂಗೀತ ಮತ್ತು ವೀಣಾವಾದನ ಕಲಾವಿದೆ ದೀಪ್ತಿ ಚಿನಿವಾರ್, ದೇಶದ ಅನೇಕ ರಾಜ್ಯಗಳಲ್ಲಿ ಸಂಸ್ಕೃತ ಅಭಿಯಾನ ಮತ್ತು ಶಿಬಿರಗಳಲ್ಲಿ ಭಾಗವಹಿಸಿ ಸಂಸ್ಕೃತ ಭಾಷೆಯನ್ನು ಕಲಿಸಿಕೊಟ್ಟ ಶ್ರುತಿ ಅವರನ್ನು ಸನ್ಮಾನಿಸಲಾಯಿತು.
ಶಾರದ ಸತ್ಸಂಗದ ವತಿಯಿಂದ ವಿವೇಕಾನಂದರ ಭಜನೆ, ದೀಪ್ತಿ ಚಿನಿವಾರ್ ಅವರಿಂದ ವೀಣಾವಾದನ ಏರ್ಪಡಿಸಲಾಗಿತ್ತು. ಮಂಜುಳಾ ಶರತ್, ಲಕ್ಷ್ಮಿ ವಿಶ್ವನಾಥ್, ಲತಾ ಗೋಪಾಲಕೃಷ್ಣ, ಪ್ರತಿಭಾ ಶಂಕರ್, ಇನ್ನರ್‌ವೀಲ್ ಕ್ಲಬ್ ಸದಸ್ಯೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement