ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೇಗದ ಜೀವನಶೈಲಿಯಿಂದ ಅಶಾಂತಿ ಹೆಚ್ಚಳ: ವಿಷಾದ

Rashmi Kasaragodu
Updated On : 13 Feb 2014, 11:46 am

ಬೀರೂರು: ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ನಂಬಿಕೆಗೆ ಚ್ಯುತಿ ಉಂಟಾಗುವ ವಾತಾವರಣ ನಿರ್ಮಾಣವಾಗುತ್ತಿರುವುದರ ಕುರಿತು ಜಾಗೃತರಾಗಬೇಕಿದೆ ಎಂದು ಉಪನ್ಯಾಸಕ ಕಲ್ಕಟ್ಟೆ ನಾಗರಾಜರಾವ್ ಹೇಳಿದರು.
ಪಟ್ಟಣದಲ್ಲಿ ಗಂಗಾಮತಸ್ಥ ಸಮಾಜದಿಂದ ನಿರ್ಮಿಸಿರುವ ಬೇಟೆ ರಂಗನಾಥಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಗತೀಕರಣ, ನಗರೀಕರಣ, ವ್ಯಾಪಾರೀಕರಣ, ಕಂಪ್ಯೂಟರೀಕರಣದ ವೇಗದಿಂದ ಏನೆಲ್ಲ ಗಳಿಸುತ್ತಿದ್ದರೂ ಮಾನಸಿಕ ಶಾಂತಿ ಗಳಿಸಲಾಗುತ್ತಿಲ್ಲ. ಕಾಯಕ ಹಾಗೂ ಧರ್ಮ ಎರಡನ್ನೂ ಸಮಾನ ದೃಷ್ಟಿಯಲ್ಲಿ ಕಂಡು ವಿಶ್ವ ಕುಟುಂಬದ ಪರಿಕಲ್ಪನೆಯನ್ನು ನಮ್ಮ ಪೂರ್ವಿಕರು 5 ಸಾವಿರ ವರ್ಷದ ಹಿಂದೆಯೇ ಜಗತ್ತಿಗೆ ನೀಡಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿ, ಧರ್ಮ ಮಾರ್ಗದ ಜೀವನದಿಂದ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಪಡೆಯುತ್ತದೆ ಎಂಬುದನ್ನು ದಾಸಶ್ರೇಷ್ಠರು ತಮ್ಮ ಅನುಭವದ ವಿಚಾರಧಾರೆಗಳ ಮೂಲಕ ತಿಳಿಸಿದ್ದಾರೆ. ಒಳ್ಳೆಯ ಕೆಲಸಗಳಿಗೆ ದೇವರು ಬಲ ತುಂಬುತ್ತಾನೆ ಎಂದರು.
ಬಾಗಕೋಟೆ ಜಿಲ್ಲೆ ಹೆಬ್ಬಾಳದ ಸಹಜಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಜಿಪಂ ಸದಸ್ಯ ಬಿ.ಪಿ.ನಾಗರಾಜ್, ಪುರಸಭಾ ಮಾಜಿ ಅಧ್ಯಕ್ಷ ಎಸ್. ರಮೇಶ್, ಗಂಗಾಮತಸ್ಥ ಸಂಘದ ಗೌರವಾಧ್ಯಕ್ಷ ಬಿ.ವಿ. ಜಯರಾಂ ಮಾತನಾಡಿದರು. ಮಿಲ್ಟ್ರಿ ಮಂಜಣ್ಣ, ಸಂಘದ ಅಧ್ಯಕ್ಷ ಬಿ.ಎಸ್. ರಾಮಚಂದ್ರಪ್ಪ, ಬಿ.ಟಿ. ಚಂದ್ರಪ್ಪ ಇತರರು ಇದ್ದರು. ನಿಶ್ಚಿತ, ರಚಿತಾ ಪ್ರಾರ್ಥಿಸಿದರು. ಬಿ.ಎಂ. ಶ್ರೀಧರ್ ಸ್ವಾಗತಿಸಿದರು. ಕಸ್ತೂರಿ ಮನೋಹರ್ ನಿರೂಪಿಸಿ, ಮಂಜುನಾಥ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement