ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಇರಲಿ

Vishwanath S
Updated On : 15 Feb 2014, 12:39 pm

ಕ.ಪ್ರ.ವಾರ್ತೆ  ತರೀಕೆರೆ  ಫೆ.14
ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಬೇಕು ಎಂದು ಪಟ್ಟಣದ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಬಿ. ಮಲ್ಲಪ್ಪ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶುಕ್ರವಾರ ಎಸ್‌ಜೆಎಂ ಕಾಲೇಜು ಆವರಣದಲ್ಲಿ ನಡೆದ ಕುವೆಂಪು ವಿವಿ ಆಂತರ ಕಾಲೇಜು ಹ್ಯಾಂಡ್‌ಬಾಲ್ ಕ್ರೀಡಾಕೂಟದ ಉದ್ಘಾಟಿಸಿ ಮಾತನಾಡಿದರು. ಕುವೆಂಪು ವಿವಿ ವೀಕ್ಷಕ ಜಿ. ಪರಮೇಶ್ವರಪ್ಪ ಮಾತನಾಡಿ, ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ವಿಶ್ವಮೂರ್ತಿ ಮಾತನಾಡಿ, ಶಿಕ್ಷಣಕ್ಕೆ ಶಿಸ್ತು ಅಡಿಗಲ್ಲು. ಪ್ರತಿಯೊಬ್ಬರಿಗೂ ಕ್ರೀಡಾ ಮನೋಭಾವ ಹಾಗೂ ಸ್ಫೂರ್ತಿ ಅಗತ್ಯ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಜಯಕೀರ್ತಿ, ಹರೀಶ್, ನಾಗರಾಜ್ ಮಾತನಾಡಿದರು. ತಾಪಂ ಅಧ್ಯಕ್ಷೆ ಶಕುಂತಲ ನಾಗರಾಜ್, ರಾಷ್ಟ್ರೀಯ ಹ್ಯಾಂಡ್‌ಬಾಲ್ ಕ್ರೀಡಾಪಟು ಲಕ್ಷ್ಮೀಶ, ಗಂಗರಾಜ್, ಚಂದ್ರಶೇಖರ್, ಸೋಮಶೇಖರ್, ಕುಮಾರ್, ತೇಜಸ್ವಿನಿ, ಉಪನ್ಯಾಸಕರು  ಕ್ರೀಡಾಪಟುಗಳು ಸೇರಿದಂತೆ ಈ ಸಂದಭಂದಲ್ಲಿ ಹಲವರು ಇದ್ದರು.
ಜಾಗತೀಕರಣದಿಂದ ಪ್ರತಿಕೂಲ ಪರಿಣಾಮ
ಶೃಂಗೇರಿ: ಜಾಗತೀಕರಣದಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅರ್ಥಶಾಸ್ತ್ರಜ್ಞ ಡಾ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಪಟ್ಟಣದ ಜೆಸಿಬಿಎಂ ಕಾಲೇಜನಲ್ಲಿ ಕಲಾಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಲಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವದೇಶಿ ವಸ್ತುಗಳ ಬೇಡಿಕೆ ವಿದೇಶಿ ಮಾಕುಕಟ್ಟೆಯಲ್ಲಿ ಗಣನೀಯವಾಗಿ ಕುಂಠಿತಗೊಳ್ಳುತ್ತಿರುವುದಕ್ಕೆ ಜಾಗತೀಕರಣವೇ ಪ್ರಮುಖ ಕಾರಣವಾಗಿದೆ. ಅಲ್ಲದೆ, ಕೃಷಿ, ಸೇವಾ ವಲಯಗಳ ಮೇಲೆಯೂ ಪರಿಣಾಮ ಬೀರಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಎಚ್.ಸಿ. ವೀರಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇತಿಹಾಸ ವಿಭಾಗದ ಕೆ.ಪಿ. ಪ್ರಕಾಶ್, ಕನ್ನಡ ವಿಭಾಗದ ಕೆ.ಎಸ್. ವೆಂಕಪ್ಪ, ಅರ್ಥಶಾಸ್ತ್ರ ವಿಭಾಗದ ಬಾಲಕೃಷ್ಣ ನಾಯಕ್, ಕಲಾ ಸಂಘದ ಅಧ್ಯಕ್ಷ ಕೆ.ಎನ್. ನಿಧಿ ಇತರರು  ಈ ಸಂದಭಂದಲ್ಲಿ ಇದ್ದರು.
ವ್ಯಾಲೆಂಟೈನ್ ಡೇ ವಿರೋಧಿಸಿ ಬೈಕ್ ಜಾಥಾ
ಚಿಕ್ಕಮಗಳೂರು: ವ್ಯಾಲೆಂಟೈನ್ ಡೇ ವಿರೋಧಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬೈಕ್ ಜಾಥಾ ನಡೆಸಿದರು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಹೊರಟ ಬೈಕ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವ್ಯಾಲೆಂಟೈನ್ ಡೇ ವಿರುದ್ಧ ಘೋಷಣೆ ಹಾಕಿದರು.
ಹಿಂದು ತರುಣಿಯರನ್ನು ಪ್ರೇಮಪಾಶದಲ್ಲಿ ಸಿಲುಕಿಸಲು ಗುಲಾಬಿ ಹೂವು, ಶುಭಾಶಯ ಪತ್ರ ಮತ್ತು ಇತರೆ ಉಡುಗೊರೆ ನೀಡುತ್ತಿರುವ ಘಟನೆಗಳು ದೇಶದಲ್ಲಿ ನಡೆಯುತ್ತಿದೆ. ಹಿಂದು ತರುಣಿಯರನ್ನು ಪ್ರೀತಿ- ಪ್ರೇಮದ ಹೆಸರಿನಲ್ಲಿ ಮರಳು ಮಾಡಿ ಧರ್ಮ ಭ್ರಷ್ಟಗೊಳಿಸಿ ಲವ್ ಜಿಹಾದ್ ಹೆಸರಿನಲ್ಲಿ ತರುಣಿಯರನ್ನು ನಂಬಿಸಿ ಮಾರಾಟ ಇನ್ನಿತರೆ ದಂಧೆಗಳಿಗೆ ಇಳಿಸುವ ಮೂಲಕ ಅಪಾಯಕಾರಿ ಕೆಲಸಕ್ಕೆ ಕೆಲವರು ಕೈ ಹಾಕುತ್ತಿದ್ದು, ಇಂತಹ ಅಪಾಯದ ಬಗ್ಗೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕೆಂದು ಪ್ರತಿಭಟನಾಕಾರರು ಕರೆ ನೀಡಿದರು.
ಬೈಕ್ ಜಾಥಾದಲ್ಲಿ ಶ್ರೀರಾಮ ಸೇನೆಯ ಮುಖಂಡರಾದ ಅನಿಲ್ ನಾಯಕ್, ಅಮಿತ್, ರಂಜಿತ್ ಶೆಟ್ಟಿ, ರಕ್ಷಿತ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪುರಂದರದಾಸರ ಆರಾಧನಾ ಮಹೋತ್ಸವ
ಕಡೂರು: ಪಟ್ಟಣದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಡೂರು ಕೋಟೆಯ ರಾಘವೇಂದ್ರ ಬೃಂದಾವನ ವಿಶ್ವಸ್ಥ ಸಮಿತಿಯಿಂದ ಆಯೋಜಿಸಿದ್ದ ಮಹೋತ್ಸವದಲ್ಲಿ ಹರಿದಾಸ ಭಜನಾ ಮಂಡಳಿಗಳಿಂದ ನಗರ ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನಿಡಲಾಯಿತು.
ಪಟ್ಟಣದಾದ್ಯಂತ ವಿವಿಧ ಭಜನಾ ತಂಡಗಳಿಂದ ಪುರಂದರದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಭಜಿಸುತ್ತಾ ಸಾಗಿದರು.
ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಭಜನಾ ಸ್ಪರ್ಧೆಏರ್ಪಡಿಸಲಾಗಿತ್ತು. ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಕೆರೆಸಂತೆ ಮಹಾಲಕ್ಷ್ಮಿ ಭಜನಾ ತಂಡಕ್ಕೆ ಪ್ರಥಮ ಸ್ಥಾನ, ಶ್ರೀವಾರಿ ಭಜನಾ ಮಂಡಳಿಗೆ ದ್ವಿತೀಯ ಸ್ಥಾನ ಹಾಗು ಶಾರದಾ ಭಜನಾ ಮಂಡಳಿಯು ತೃತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ರಾಘವೇಂದ್ರಸ್ವಾಮಿ ಮಠದಿಂದ ಬಹುಮಾನ ವಿತರಿಸಲಾಯಿತು. ರಾಘವೇಂದ್ರ ಸ್ವಾಮಿಗಳ ಮಠದ ಪದಾಧಿಕಾರಿಗಳಾದ ಎಚ್.ಪಿ.ನಾಗರಾಜರಾವ್, ಟಿ.ಎಲ್. ರಾಘವೇಂದ್ರರಾವ್, ಮಾಧುಮೂರ್ತಿ, ಭಜನಾ ಮಂಡಳಿ ಪ್ರಮುಖರಾದ ಕೆ. ರಮೇಶ್, ಪುರಸಭೆಯ ಮಾಜಿ ಸದಸ್ಯ ಸುರೇಶ್, ಅರ್ಚಕ ರಾಮಾಚಾರ್ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
ನಾಳೆ ಅಭಾವೀಮದಿಂದ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ಕಡೂರು, ಫೆ.14
ಫೆ. 16ರಂದು ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 16ರ ಭಾನುವಾರ ಸಂಜೆ 4 ಗಂಟೆಗೆ ಕಡೂರು ಕೆ. ಹೊಸಳ್ಳಿಯ  ಗಂಗಾಂಬಿಕ ಸಮುದಾಯ ಭವನದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಹುಲಿಕೆರೆಯ ವಿರೂಪಾಕ್ಷ ಘನಲಿಂಗ ಶಿವಾಚಾರ್ಯ ಸ್ವಾಮೀಜಿ, ಯಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ಹಾಗು ಚಿಕ್ಕಮಗಳೂರಿನ ಕುರುಬರಹಳ್ಳಿಯ ಜಯ ಬಸವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಡಿ ರೇಣುಕಯ್ಯ, ಎಚ್.ವಿ. ಗಿರೀಶ್, ಎಚ್.ಎಂ. ಬಸವರಾಜು, ಚಂದ್ರಶೇಖರಪ್ಪ, ಬಸವರಾಜಪ್ಪ ಮತ್ತಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement