ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಾಲೂಕು ಸಮ್ಮೇಳನಾಧ್ಯಕ್ಷರಾಗಿ ಕೆಜಿಎನ್ ಶಾಸ್ತ್ರಿ ಆಯ್ಕೆ

Lingaraj Badiger
Updated On : 17 Feb 2014, 11:04 am

ಕೊಪ್ಪ: ಫಲಾಫಲಗಳ ಬಗ್ಗೆ ಚಿಂತಿಸದೆ ನಿನ್ನ ಕರ್ಮಗಳನ್ನು ನೀನು ಮಾಡು ಎಂಬ ಭಗವದ್ಗೀತೆಯ ಸಂದೇಶ ಅಕ್ಷರಶಃ ನಿಜಾನುಭವ ನನಗೆ ಕೊಟ್ಟಿದೆ ಎಂದು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಉಪನ್ಯಾಸಕ ಕೆ.ಜಿ.ಎನ್. ಶಾಸ್ತ್ರಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪದಾಧಿಕಾರಿಗಳು ಶನಿವಾರ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಲು ಹರಿಹರಪುರ ಗ್ರಾಮದ ಎಡದಂಡೆಯ ಕೆ.ಜಿ.ಎನ್. ಶಾಸ್ತ್ರೀಯವರ ನಿವಾಸ ಗಿರಿಪಾದಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಅವರು ಮಾತನಾಡಿ, ಆಂಗ್ಲಭಾಷಾ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ ನನ್ನನ್ನು ಅಭಿಮಾನಿ ಶಿಷ್ಯರಿಂದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಅತ್ಯುನ್ನತ ಗೌರವ ನೀಡಿರುವುದಕ್ಕೆ ಹೃದಯ ತುಂಬಿ ಬಂದಿದೆ ಎಂದ ಅವರು ಕಾಲೇಜಿನಲ್ಲಿ ಹಲವು ನಾಟಕಗಳನ್ನು ಬರೆದು ನಿರ್ದೇಶಿಸಿದ ಅನುಭವ ಮೆಲುಕು ಹಾಕಿದರು.
ತುಂಬು ಸ್ವಾಗತ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಸ್. ನಟರಾಜ್ ಮಾತನಾಡಿ, ಬಸರಿಕಟ್ಟೆಯಲ್ಲಿ ನಡೆಯುವ ತಾಲೂಕಿನ 7ನೇ ಸಮ್ಮೇಳನದ ನೇತೃತ್ವ ವಹಿಸಲು, ನಿಯೋಜಿತ ಸಮಿತಿ ಸರ್ವಾನುಮತದ ಮೂಲಕ ಕೆ.ಜಿ.ಎನ್. ಶಾಸ್ತ್ರಿಯವರನ್ನು ಆಯ್ಕೆಮಾಡಿದ್ದು, ತಾಲೂಕಿನಾದ್ಯಂತ ವ್ಯಾಪಕ ತುಂಬು ಸ್ವಾಗತ ದೊರೆತಿದೆ ಎಂದರು.
ಕೆ.ಜಿ.ಎನ್. ಶಾಸ್ತ್ರಿ ದಂಪತಿಗಳಿಗೆ ಫಲ ಸಮಾರ್ಪಣೆ ಮೂಲಕ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಸ್. ಮಹಾಬಲ, ನಿಕಟಪೂರ್ವ ಸ್ವಾಗತ ಸಮಿತಿಯ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಸಾಹಿತ್ಯ ಪರಿಷತ್ತು ಪದಾಧಿಕಾರಿ ಎ.ಜಿ. ವೆಂಕಟೇಶ್, ಶಿವಾನಂದ ರಾವ್, ರಮೇಶ್, ವಿವೇಕಾನಂದ. ಶ್ರೀಹರ್ಷ, ಎಚ್.ಎಸ್. ಇನೇಶ್, ಛಾವಲ್ಮನೆ ಜಗದೀಶ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement