ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಂಭ್ರಮದ ಆಂಜನೇಯ ಉತ್ಸವ

Lingaraj Badiger
Updated On : 17 Feb 2014, 11:04 am

ಚಿಕ್ಕಮಗಳೂರು:  ತಾಲೂಕಿನ ತೇಗೂರಿನಲ್ಲಿ ಗ್ರಾಮದ ಪ್ರಮುಖ ದೇವತೆ ಆಂಜನೇಯ ಸ್ವಾಮಿಯ ವಾರ್ಷಿಕ ಉತ್ಸವ ಭಾನುವಾರ ಶ್ರದ್ಧಾ- ಭಕ್ತಿಯಿಂದ ನಡೆಯಿತು.
ಬೆಳಗ್ಗೆ ಸೂರ್ಯೋದಯವಾಗುತ್ತಿದ್ದಂತೆ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಟ್ರ್ಯಾಕ್ಟರ್‌ನಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮೀಣ ವಾದ್ಯಗಳ ನಡುವೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಮನೆಗಳ ಮುಂದೆ ರಂಗವಲ್ಲಿ ಹಾಕಿ, ಮೆರವಣಿಗೆ ಸ್ವಾಗತಿಸಿದ ಗ್ರಾಮಸ್ಥರು, ಉತ್ಸವಮೂರ್ತಿಯ ಎದುರು ಮಣೆಯನ್ನಿಟ್ಟು ಅದರ ಮೇಲೆ ಬಾಳೆಹಣ್ಣಿನ ರಸಾಯನವನ್ನು ಹಾಕಿ ನೈವೇದ್ಯ ಸಮರ್ಪಿಸಿದರು.
ಗ್ರಾಮದ ಪ್ರತಿ ಮನೆಯ ಮುಂದೆ ಸಾಲುಗಟ್ಟಿ ನಿಂತಿದ್ದ ಗ್ರಾಮಸ್ಥರು ಹಣ್ಣು, ಕಾಯಿ ಸಮರ್ಪಿಸಿ, ಆರತಿ ಎತ್ತಿ, ಇಡಿಗಾಯಿ ಹಾಕಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆ ಮುಗಿದ ನಂತರ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಿತು. ಉತ್ಸವದ ಅಂಗವಾಗಿ ಗಣಪತಿ, ನವಗ್ರಹ ಮತ್ತು ರಾಮತಾರಕ ಹೋಮ ನಡೆಸಲಾಯಿತು.
ಪೂರ್ಣಾಹುತಿಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ರಾಜ್ ಅರಸ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಗ್ರಾಮದ ಮುಖಂಡರಾದ ಹನುಮಂತರಾಜು, ಉಮೇಶ್ ರಾಜು, ಕೃಷ್ಣರಾಜು, ವಸಂತರಾಜು, ತಿರುಮಲ ರಾಜು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement