'ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು'
ತರೀಕೆರೆ: ವಿದ್ಯಾರ್ಥಿಗಳು ಹೆಚ್ಚು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ ರಾಮ ಸುಬ್ರಾಯ ಶೇಟ್ ತಿಳಿಸಿದ್ದಾರೆ.
ಅವರು, ಸೋಮವಾರ ಕನ್ನಡ ಸಂಸ್ಕೃತಿ ಇಲಾಖೆ, ಗಮಕ ಕಲಾ ಪರಿಷತ್ ತಾಲೂಕು ಘಟಕ ವತಿಯಿಂದ ಪಟ್ಟಣದ ಯಶೋದಮ್ಮ ನಾಗತಿ ಪ್ರೌಢಶಾಲೆ ಅವರಣದಲ್ಲಿ ಭೀಷ್ಮ ವಿಜಯ ವಿಷಯವಾಗಿ ಏರ್ಪಾಡಾಗಿದ್ದ ಗಮಕ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಗಮಕ ವ್ಯಾಖ್ಯಾನಿಸಿ ಮಾತನಾಡುತ್ತಿದ್ದರು.
ಶ್ರೇಷ್ಠ ಸಂಸ್ಕೃತಿ: ರಾಮಾಯಣ ಮಹಾಭಾರತ ಕೇವಲ ಕಥೆಯಲ್ಲ, ಅದರಲ್ಲಿ ನೈತಿಕತೆ ತುಂಬಾ ಇದೆ, ಭಾರತೀಯ ಸಂಸ್ಕೃತಿ ವಿಶೇಷವಾದ ಮಹೋನ್ನತಿಯಿಂದ ಕೂಡಿದೆ, ಭಾರತ ದೇಶದ ಸಂಸ್ಕೃತಿ ಇಡೀ ವಿಶ್ವದಲ್ಲೇ ಶ್ರೇಷ್ಠವಾದ ಸಂಸ್ಕೃತಿಯಾಗಿದೆ, ತಂದೆ ತಾಯಿಗಳನ್ನು ಪ್ರೀತಿ ಪ್ರೇಮದಿಂದ ಕಾಣಬೇಕು, ವೃದ್ದಾಶ್ರಮ, ಸಂದ್ಯಾಶ್ರಮಗಳು ನಮ್ಮ ದೇಶದ ಸಂಸ್ಕೃತಿಯಲ್ಲ ಎಂದು ತಿಳಿಸಿದ ಅವರು ಗಮಕ ವಿಶಿಷ್ಟವಾದ ಕಲೆಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಜತೆ ಸಂವಾದ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಅವರು ಮಾತನಾಡಿ ಕೊಟ್ಟ ಮಾತನ್ನು ಪಾಲಿಸಬೇಕು, ತ್ಯಾಗಕ್ಕೆ ಹೆಚ್ಚು ಶಕ್ತಿ ಇದೆ ಎಂದು ತಿಳಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನೆಡೆಸಿದರು.
ಶಾಲೆ ಮುಖ್ಯೋಪಾಧ್ಯಾಯ ಎಂ.ಎನ್.ಪಂಚಾಕ್ಷರಯ್ಯ ಅವರು ಸಮಾರಂಭದ ಉದ್ಗಾಟನೆ ನೆರವೇರಿಸಿ ಮಾತನಾಡಿದರು.
ಗಮಕ ಕಲಾ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಜಿ.ಸಿದ್ದರಾಮಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿ ನೈತಿಕತೆ ಹೆಚ್ಚಿಸಬೇಕು, ಮಕ್ಕಳಲ್ಲಿ ಉತ್ತಮ ಚಾರಿತ್ರ್ಯ ಬೆಳಸಬೇಕು, ರಾಮಾಯಣ ಮಹಾಭಾರತದ ಪಾತ್ರಗಳು ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಅಧ್ಯಕ್ಷ ಎನ್.ವೆಂಕಟೇಶ್, ಶಶಿಕಲಾ, ನಾಗರಾಜ್, ಹಿರೇಮಠ್, ಶಿಕ್ಷಕರು, ವಿದ್ಯಾರ್ಥಿಗಳು ಸಮಾರಂಬದಲ್ಲಿ ಭಾಗವಹಿಸಿದ್ದರು. ಕನ್ನಡಶ್ರೀ ಬಿ.ಎಸ್.ಭಗವಾನ್, ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ ರಾಮ ಸುಬ್ರಾಯ ಶೇಟ್ ಅವರಿಂದ ಭೀಷ್ಮ ವಿಜಯ ಗಾಯನ ಮತ್ತು ವ್ಯಾಖ್ಯಾನವನ್ನು ಏರ್ಪಡಿಸಲಾಗಿತ್ತು.