ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಧುನಿಕತೆ ಭರಾಟೆಯಲ್ಲಿ ಸಂಸ್ಕೃತಿ ಮರೆಯದಿರಿ

Vishwanath S
Updated On : 19 Feb 2014, 11:22 am

ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಫೆ.18
ಟಿ.ವಿ, ಮೊಬೈಲ್, ಕಂಪ್ಯೂಟರ್‌ನಂತಹ ಆಧುನಿಕ ಪರಿಕರಣಗಳನ್ನು ಬಳಸುತ್ತಿರುವ ಯುವ ಜನರು ಭಾರತೀಯ ಸಂಸ್ಕೃತಿಯನ್ನು ಮಾತ್ರ ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಅನ್ನಪೂರ್ಣ ಕೇಶವ ಹೇಳಿದರು.
ಮಂಗಳವಾರ ಕುದುರೆಗುಂಡಿ ಅಶ್ವಗುಂಡೇಶ್ವರ ಸಮುದಾಯ ಭವನದಲ್ಲಿ ನಡೆದ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಚೀಯ ಸೇವಾ ಯೋಜನೆಯ 2013- 14ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ಆಯಾ ತಾಲೂಕಿನ ವ್ಯಾಪ್ತಿಯಲ್ಲೇ ಎನ್‌ಎಸ್‌ಎಸ್ ಶಿಬಿರ ನಡೆಸುವುದರ ಬದಲು ಬೇರೆ ಜಿಲ್ಲೆಗಳಲ್ಲಿ ಎನ್‌ಎಸ್‌ಎಸ್ ಶಿಬಿರ ನಡೆಸಿದರೆ ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳನ್ನು ಶಿಬಿರಾರ್ಥಿಗಳು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಕೊಪ್ಪ ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್ ಮಾತನಾಡಿ, ವಿದ್ಯಾರ್ಥಿ ಜೀವನವು ಪ್ರತಿಯೊಬ್ಬ ಮನುಷ್ಯರ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿ ಜೀವನದಲ್ಲೇ ಶಿಸ್ತುಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಸಿ. ವೆಂಕಟೇಶ್ ಮಾತನಾಡಿ, ರಾಷ್ಚೀಯ ಸೇವಾ ಯೋಜನೆಯ ವತಿಯಿಂದ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಕ್ಯಾಂಪುಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲೂ ಸಹ ಅಂತರ ಜಿಲ್ಲಾ ಎನ್‌ಎಸ್‌ಎಸ್ ಕ್ಯಾಂಪ್ ನಡೆಸಲು ಚಿಂತಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪುಟ್ಟಸ್ವಾಮಿ, ದೇಶದಲ್ಲಿ ಪ್ರಸ್ತುತ 300ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯದಲ್ಲಿ 30 ಲಕ್ಷಕ್ಕೂ ಎನ್‌ಎಸ್‌ಎಸ್ ಸದಸ್ಯರಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 3 ಲಕ್ಷ ಸದಸ್ಯರಿದ್ದಾರೆ. ಯುವ ಜನರಲ್ಲಿ ನಾಯಕತ್ವ ಗುಣ ಹುಟ್ಟು ಹಾಕುವುದು ಎನ್‌ಎಸ್‌ಎಸ್ ಶಿಬಿರದ ಮುಖ್ಯ ಗುರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಪ್ಪ ತಾಪಂ ಉಪಾಧ್ಯಕ್ಷ ಕೆ.ಪೂರ್ಣಚಂದ್ರ, ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯ ಕೆ.ಕೆ. ಶಿವರಾಜ್, ಸದಸ್ಯರಾದ ವಿಠಲಮಕ್ಕಿ ಶಿವಪ್ಪ, ವಿಠಲಮಕ್ಕಿ ಸತೀಶ್ ಉಪಸ್ಥಿತರಿದ್ದರು.
ಆರ್.ಅಕ್ಷತಾ ಪ್ರಾರ್ಥಿಸಿದರು. ನಿಸರ್ಗ ಮತ್ತು ಸಂಗಡಿಗರು ರಾಷ್ಟ್ರೀಯ ಸೇವಾ ಯೋಜನೆ ಗೀತೆ ಹಾಡಿದರು.ನವೀನ್‌ಕುಮಾರ್ ಸ್ವಾಗತಿಸಿದರು. ಶ್ರುತಿ ಮತ್ತು ಮಣಿಕಾಂತ್ ಕಾರ್ಯಕ್ರಮ ನಿರೂಪಿಸಿದರು. ಆಶಿಕಾ ವಂದಿಸಿದರು.
ಇದಕ್ಕೂ ಮೊದಲು ಶಿಬಿರಾರ್ಥಿಗಳಿಗೆ ಗಾರ್ಡನಿಂಗ್ ಮತ್ತು ಪುಷ್ಪೋದ್ಯಮದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಾಯಿತು. ನಂತರ ಏಡ್ಸ್ ಅರಿವು ಮೂಡಿಸಲು ಕುದುರೆಗುಂಡಿಯ ಮುಖ್ಯ ಬೀದಿಯಲ್ಲಿ ಜಾತಾ ನಡೆಸಲಾಯಿತು. ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಚಿಕ್‌ಗಳನ್ನು ಹೆರಕಿ ಸ್ವಚ್ಛ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement