22, 23ರಂದು ದೇವನೂರಿನಲ್ಲಿ ಗಮಕ ಕಲಾ ಮಹೋತ್ಸವ
ಚಿಕ್ಕಮಗಳೂರು: ಸಂಸ್ಕೃತಿ ಸಚಿವಾಲಯ, ದೇವನೂರು ಚಾರಿಟಬಲ್ ಟ್ರಸ್ಟ್, ಲಕ್ಷ್ಮೀಶ ಸೇವಾ ಸಮಿತಿ ಹಾಗೂ ಲಕ್ಷ್ಮೀಶ ಸಂಶೋಧನ ಕೇಂದ್ರದ ಆಶ್ರಯದಲ್ಲಿ ದೇವನೂರಿನಲ್ಲಿ ಫೆ.22 ಮತ್ತು 23ರಂದು ಗಮಕ ಕಲಾ ಮಹೋತ್ಸವ ನಡೆಯಲಿದೆ ಎಂದು ದೇವನೂರು ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಡಿ.ಆರ್. ಪಾಂಡುರಂಗ ತಿಳಿಸಿದ್ದಾರೆ.
ದೇವನೂರಿನ ಕವಿ ಲಕ್ಷ್ಮೀಶ ಕಾವ್ಯ ಮಂಟಪದಲ್ಲಿ ನಡೆಯಲಿರುವ ಗಮಕ ಕಲಾ ಮಹೋತ್ಸವವನ್ನು ಕರ್ನಾಟಕ ಗಮಕ ಕಲಾ ಪರಿಷತ್ನ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ ಅವರು ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಶಂಕರನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೇವನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ನಟರಾಜ್, ವಿಜಯ ಭಾಸ್ಕರ್ ಭಾಗವಹಿಸಲಿದ್ದಾರೆ ಎಂದರು.
ಬೆಳಿಗ್ಗೆ 11.30 ಗಂಟೆಗೆ ನಡೆಯಲಿರುವ ಪಂಪ ಭಾರತ ಗೋಷ್ಠಿಯಲ್ಲಿ ಎಂ.ಆರ್. ಸತ್ಯನಾರಾಯಣ ವಾಚನ, ತೆಕ್ಕೆಕೆರೆ ಸುಬ್ರಹ್ಮಣ್ಯಭಟ್ ಅವರಿಂದ ವ್ಯಾಖ್ಯಾನ, ಪ್ರಭುಲಿಂಗ ಲೀಲೆ ಗೋಷ್ಠಿಯಲ್ಲಿ ಹಾಸನದ ಗಣೇಶ್ ಉಡುಪ ವಾಚನ, ತುಮಕೂರಿನ ಗ.ಸ. ಶ್ರೀನಿವಾಸಮೂರ್ತಿ ವ್ಯಾಖ್ಯಾನ ಮಾಡಲಿದ್ದಾರೆ. ನಡುಗನ್ನಡ- ಕುಮಾರವ್ಯಾಸ ಗೋಷ್ಠಿಯಲ್ಲಿ ಗಂಗಮ್ಮ ಕೇಶವಮೂರ್ತಿ ವಾಚನ, ಶಾಂತ ಗೋಪಾಲ್ ವ್ಯಾಖ್ಯಾನ, ಲಕ್ಷ್ಮೀಶ- ಜೈಮಿನಿ ಭಾರತ ಗೋಷ್ಠಿಯಲ್ಲಿ ಗಮಕಿ ಡಿ.ಆರ್. ವೆಂಕಟಸುಬ್ಬಯ್ಯ ವಾಚನ, ತಾರಾ ಪ್ರಸಾದ್ ವ್ಯಾಖ್ಯಾನ ಮಾಡಲಿದ್ದಾರೆ.
ಫೆ.23ರಂದು ಬೆಳಗ್ಗೆ 10 ಗಂಟೆಗೆ “ÁÛÈÚáÛ¾Úßy ¥ÚËÚ%«ÚM’ ಗೋಷ್ಠಿಯಲ್ಲಿ ಶಶಿಕಲಾ ಶಿವಶಂಕರ್ ವಾಚನ, ರುಕ್ಮಿಣಿ ನಾಗೇಂದ್ರ ವ್ಯಾಖ್ಯಾನ, ತೊರವೆ ರಾಮಾಯಣ ನರಹರಿ ಗೋಷ್ಠಿಯಲ್ಲಿ ರಾಮಾನುಜಂ, ಎಂ.ಆರ್. ಕೇಶವಮೂರ್ತಿ ಅವರಿಂದ ವಾಚನ, ಹರಿಶ್ಚಂದ್ರ ಕಾವ್ಯ ಕುರಿತು ಲಕ್ಷ್ಮೀ ಜಯಪ್ರಕಾಶ್ ಅವರಿಂದ ವಾಚನ, ಡಾ. ಪಾವಗಡ ರೇಣುಕಪ್ರಸಾದ್ ಅವರಿಂದ ವ್ಯಾಖ್ಯಾನ, ಪುತಿನ ಅವರ “*ÔÚÂ ^ÚÂ}æ’ ಕುರಿತು ಡಾ.ಸನತ್ ಕುಮಾರ್ ಅವರಿಂದ ವಾಚನ, ಎಚ್.ಎಸ್. ಗೋಪಾಲ್ ಅವರಿಂದ ವ್ಯಾಖ್ಯಾನ ನಡೆಯಲಿದೆ. ಅಂದು ಸಂಜೆ 4.15 ಗಂಟೆಗೆ ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ.ಎಸ್. ಸೋಮಶೇಖರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.