ಕೃಷಿ ಮೇಳ ಉತ್ತೇಜಿಸಿ
ಕಡೂರು: ಕೃಷಿ ಉತ್ಸವಗಳನ್ನು ಹೆಚ್ಚು ಹೆಚ್ಚಾಗಿ ಏರ್ಪಡಿಸುವ ಮೂಲಕ ಕೃಷಿಯನ್ನು ಉತೇಜಿಸಬೇಕು ಎಂದು ತಹಸೀಲ್ದಾರ್ ತಿಮ್ಮಾ ಭೋವಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಶ್ರೀ ಸ್ವರ್ಣಾಂಬ ಸನ್ನಿಧಿ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ನಡೆದ ಕೃಷಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಕೃಷಿಗೆ ಉತ್ತೇಜನ ನೀಡಲು ಇಂತಹ ಮೇಳಗಳು ಸಹಕಾರಿ ಎಂದರು.
ವಲಸೆ ತಡೆ: ತಾಲೂಕು ವೈದ್ಯಾಧಿಕಾರಿ ಡಾ ಎಸ್.ಕೆ. ಪ್ರಭು, ಇಂತಹ ಕೃಷಿ ಉತ್ಸವಗಳಿಂದ ರೈತರ ಮಕ್ಕಳು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗದಂತೆ ಆಧುನಿಕ ತಂತ್ರಜ್ಞಾನದಿಂದ ಕೃಷಿಯಲ್ಲ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ನೆರವಾಗಲಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ, ಶ್ರೀ ಸ್ವರ್ಣಾಂಬ ಸನ್ನಿಧಿಯಲ್ಲಿ ವ್ಯವಸ್ಥಾಪಕರಾದ ಶ್ರೀ ಎಂ.ಟಿ. ಶ್ರೀನಿವಾಸ್ ಮತ್ತು ಅವರ ತಂಡದ ಸಹಕಾರದಿಂದ ಶ್ರೀಹೆಗ್ಗಡೆಯವರು ಆಶಯ ಈಡೇರುವ ನಿಟ್ಟಲ್ಲಿ ಯಶಸ್ವಿಯಾಗಿ ನಡೆದಿದೆ ಎಂದರು.
ಮಹಿಳಾ ಸಬಲೀಕರಣ: ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಯುವಕರಿಗೆ ಜಾಗೃತಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ಕೃಷಿ ಉತ್ಸವ ಯಶಸ್ವಿಯಾಗಿದೆ ಎಂದರು. ಸ್ವರ್ಣಾಂಬ ಸನ್ನಿಧಿ ಕಾರ್ಯದರ್ಶಿ ಎಂ. ವೈ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕೃಷಿ ಸಾಧಕರಾದ ಗೌಡನಕಟ್ಟೆ ಹಳ್ಳಿ ಕೃಷ್ಣಮೂರ್ತಿ, ಗಿರಿಯಾಪುರದ ಕಾಶೀನಾಥ್, ಸಖರಾಯಪಟ್ಟಣದ ರಾಘವೇಂದ್ರ, ಮಲ್ಲೇಶಪ್ಪ ಇವರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಶಿವಾನಂದಯ್ಯ, ವಿಜಯ ಬ್ಯಾಂಕ್ ವ್ಯವಸ್ಥಾಪಕರಾದ ಬಸವರಾಜ್, ಡಾ ಸುರೇಂದ್ರ,ಯೋಜನಾಧಿಕಾರಿ ಎ. ದಿನೇಶ್, ದೇವಾಲಯದ ಧರ್ಮದರ್ಶಿ ಎಂ. ಆರ್.ಧರ್ಮಣ್ಣ, ಕಿಶೋರ್ಕುಮಾರ್,ಬಿ. ಬಾಬು,ಎಂ.ಪಿ.ಗಣೇಶ್, ಸಂತೋಷ್, ಬಾಲುಮಚ್ಚೇರಿ ,ಎಂ.ಇ. ಲೋಕೇಶಪ್ಪ, ಎಂ.ಇ. ಬಸಪ್ಪ,ಎಂ.ಎನ್. ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.