ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕುಡಿಯುವ ನೀರು ಪೂರೈಕೆಗೆ ಪ್ರಯತ್ನ'

Lingaraj Badiger
Updated On : 21 Feb 2014, 11:31 am

ಕಡೂರು: ಬಯಲು ಪ್ರದೇಶದ ಸಮಸ್ಯೆಗಳ ಅರಿವಿರುವ ನೂತನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ತಮಗೆ ಸಿಕ್ಕಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಬಯಲು ಪ್ರದೇಶದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ ಹೇಳಿದರು.
 ಅವರು ಕಡೂರು ಪಟ್ಟಣದ ಮುತ್ತು ಮಾರಿಯಮ್ಮ ದೇವಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಪದ್ಮಾ ಚಂದ್ರಪ್ಪನವರನ್ನು ಬಿಜೆಪಿ ನಗರ ಘಟಕದಿಂದ ಅಭಿನಂದಿಸಿ ಮಾತನಾಡಿದರು.
 ಕಡೂರು ತಾಲೂಕು ಸತತ ಬರಗಾಲದ ಹೊಡೆತಕ್ಕೆ ಸಿಲುಕಿದ್ದು ರೈತರು ಜನ ಜಾನುವಾರುಗಳು ತೊಂದರೆಗೆ ಒಳಗಾಗಿ ಮಳೆ ಬೆಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಜಮೀನುಗಳು ಒಣಗಿವೆ. ಇಂತಹ ಸ್ಥಿತಿಯಲ್ಲಿ ಪದ್ಮಾ ಚಂದ್ರಪ್ಪನವರು ನೀರಿನ ಸಮಸ್ಯೆ ನಿವಾರಣೆಗಾಗಿ ತುರ್ತು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸವಲತ್ತು ಒದಗಿಸಲು ಪ್ರಯತ್ನ: ಅಭಿನಂದನೆ ಸ್ವೀಕರಿಸಿದ ಪದ್ಮಾ ಚಂದ್ರಪ್ಪ ಮಾತನಾಡಿ, ತಮಗೆ ದೊರೆತಿರುವ ಈ ಅಧ್ಯಕ್ಷಗಿರಿಯಿಂದ ಕೆಲಸ ಮಾಡುವ ಮೂಲಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸವಲತ್ತು ಒದಗಿಸುವುದು ಸೇರಿದಂತೆ ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
 ಇದೇ ಸಂದರ್ಭದಲ್ಲಿ ತಾಲೂಕು ಯುವ ಮೋರ್ಚಾ ಘಟಕದಿಂದ ಮನೆ ಮನೆಗೆ ಬಿಜೆಪಿ ಕಾರ್ಯಕ್ಕೆ ಅವರು ಚಾಲನೆ ನೀಡಿದರು.
 ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಹೆಚ್.ಶಂಕರ್,ಕಾರ್ಯದರ್ಶಿ ಆನಂದ್,ಪುರಸಭಾ ಸದಸ್ಯ ರಾಜೇಶ್, ಯುವ ಮೋರ್ಚಾ ನಗರಾಧ್ಯಕ್ಷ ಕೋಟೆ ಆನಂದ್,ಅಂಬೇಡ್ಕರ್ ನಗರದ ಸುರೇಶ್, ಸಿಂಗಟಗೆರೆ ಶಕ್ತಿ ಕೇಂದ್ರದ ವಸಂತಕುಮಾರ್, ಪ್ರಭು, ಮಂಜೇಶ್, ಕೇಬಲ್ ಜಗದೀಶ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement