ನಾಳೆ ಅಮೃತೋತ್ಸವ
ತರೀಕೆರೆ: ಸಮೀಪದ ಅಮೃತಾಪುರ ಗ್ರಾಮದ ಅಮೃತೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಫೆ. 22ರಂದು ಬೆಳಗ್ಗೆ 11 ಗಂಟೆಗೆ ಅಷ್ಟ ಶತಮಾನೋತ್ಸವ-ಅಮೃತೋತ್ಸವ ಮತ್ತು ಶಾರದಾ ದೇವಿಯವರ ವಿಗ್ರಹ ಪುನರ್ ಪ್ರತಿಷ್ಠಾಪನೆ ಏರ್ಪಡಿಸಲಾಗಿದೆ. ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದು, ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರು ಉದ್ಘಾಟನೆ ನೆರವೇರಿಸುವರು. ಶಾಸಕ ಜಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಂಸ್ಕೃತಿ ಸಚಿವೆ ಚಂದ್ರೇಶ್ಕುಮಾರಿ ಕಾಟೋಜ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್.
ಶಂಕರಮೂರ್ತಿ, ಸಚಿವರಾದ ಕೆ. ಅಭಯಚಂದ್ರ ಜೈನ್, ಆರ್.ವಿ.ದೇಶಪಾಂಡೆ, ಪ್ರಕಾಶ್ ಬಿ. ಹುಕ್ಕೇರಿ, ಉಮಾಶ್ರೀ, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ತಿಕ್, ಮೋಟಮ್ಮ, ಗಾಯಿತ್ರಿ ಶಾಂತೇಗೌಡ, ಎಂ. ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಸುಜಾತ, ತಾಪಂ ಅಧ್ಯಕ್ಷೆ ಶಕುಂತಲ ನಾಗರಾಜ್, ಅಮೃತೇಶ್ವರ ಸ್ವಾಮಿ ದೇವಸ್ಥಾನದ ದಾಸೋಹ ಸಮಿತಿ ಅಧ್ಯಕ್ಷ ಎ.ಎಸ್. ಈಶ್ವರಪ್ಪ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.