ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೆಳೆ ರೋಗ ನಿಯಂತ್ರಿಸಲು ಆಸಕ್ತಿ ವಹಿಸಿ

Lingaraj Badiger
Updated On : 22 Feb 2014, 11:02 am

ಕ.ಪ್ರ.ವಾರ್ತೆ  ತರೀಕೆರೆ  ಫೆ. 21. ತೋಟಗಾರಿಕೆ ಬೆಳೆಗಳಲ್ಲಿ ರೋಗ ನಿಯಂತ್ರಿಸಲು ರೈತರು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸಸ್ಯರೋಗ ಶಾಸ್ತ್ರ ಪ್ರಾಧ್ಯಾಪಕ ಡಾ.ಎಚ್.ನಾರಾಯಣಸ್ವಾಮಿ ತಿಳಿಸಿದರು.
ಅವರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ತೋಟಗಾರಿಕೆ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶುಕ್ರವಾರ ಕಾಲೇಜು ಆವರಣದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ರೋಗ ನಿರ್ವಹಣೆ ಕುರಿತು ಏರ್ಪಾಡಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮನುಷ್ಯನಿಗೆ ಬಂದ ಹಾಗೆ ಗಿಡಮರಗಳಿಗೂ ಹಲವು ರೋಗ ತಗಲುತ್ತವೆ. ಮರಗಳನ್ನು ಕಾಪಾಡಬೇಕು, ತಾಂತ್ರಿಕತೆಯನ್ನು ವೈಜ್ಞಾನಿಕವಾಗಿ ಅಳವಡಿಸಬೇಕು, ಅಧಿಕ ಇಳುವರಿ ಕೊಡುವ ಆರೋಗ್ಯಪೂರ್ಣ ಸಸಿಗಳನ್ನು ಬೆಳೆಸಬೇಕು, ತಪ್ಪು ಬೇಸಾಯದಿಂದ ರೋಗ ಸಮಸ್ಯೆಗಳಿಗೆ ನಾವೇ ಕಾರಣ ಎಂದು ತಿಳಿಸಿದ ಅವರು ಅಸಂಪ್ರದಾಯಕವಾಗಿ ಬೆಳೆ ಬೆಳೆದರೆ ರೋಗ ಹರಡುತ್ತದೆ ಎಂದುತಿಳಿಸಿದರು.
ಉಪ ಬೆಳೆಗಳು: ಆರ್ಥಿಕ ಸಬಲತೆ ಮತ್ತು ಆಹಾರದಲ್ಲಿ ಸ್ವಾವಲಂಬನೆ ಪಡೆಯಬೇಕು. ಬೆಳೆಗಳನ್ನು ರೋಗದಿಂದ ರಕ್ಷಿಸಬೇಕು. ಸಮಸ್ಯೆ ಮುಂದುವರೆಯಲು ಬಿಡಬಾರದು, ತೋಟಗಾರಿಕೆಯಲ್ಲಿ ಕೋಕೋ, ಮೆಣಸು, ಜಾಯಿಕಾಯಿ ಇತ್ಯಾದಿ ಉಪಬೆಳೆಗಳಿಗೆ ಒಳ್ಳೆಯ ಬೆಲೆ ಇದೆ. ವ್ಯವಸ್ಥೆಗಳನ್ನು ಸಮಚಿತ್ತವಾಗಿ ಬಳಸಿಕೊಳ್ಳಬೇಕು. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದೂ ನಾಶವಾಗುವುದಿಲ್ಲ ಎಂದು ಅವರುತಿಳಿಸಿದರು.
ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿ, ವೀಳೆಯದೆಲೆ ಬಳ್ಳಿಗೆ ರೋಗ ತಗುಲಿ ಸಣ್ಣ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ. ಅಡಕೆ ಬೆಳೆಗೆ ಅಣಬೆ ಹಿಡಿಮುಂಡಿಗೆ, ಕೊಳೆ ರೋಗ ಇತ್ಯಾದಿ ಹಲವು ರೋಗಗಳಿಂದ ಅಡಕೆ ಮರಗಳು ನಲುಗಿ ಹೋಗಿದೆ. ಇಂತಹ ಕಾರ್ಯಕ್ರಮಗಳಿಂದ ರೈತರ ಜೀವನಕ್ಕೆ ಪ್ರಗತಿ ಪಥ ತೋರಿಸಲಿ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಕರಿಬಸವನಾಯ್ಕ ಅವರು ರೋಗ ನಿರ್ವಹಣೆಗೆ ಇಲಾಖೆ ಸವಲತ್ತು ಬಗ್ಗೆ ವಿವರಿಸಿದರು.
ಟಿ.ಜಿ. ಶಶಾಂಕ, ಉಪನ್ಯಾಕ ಗಂಗರಾಜ್, ಜಯಕೀರ್ತಿ, ಕುಮಾರ್, ನಿಂಗೇಗೌಡ, ರೈತರು, ಉಪನ್ಯಾಸಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement