ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಕ್ತದಾನದಿಂದ ಪ್ರಾಣ ರಕ್ಷಣೆ: ಶ್ಯಾಮಸುಂದರ್

Lingaraj Badiger
Updated On : 22 Feb 2014, 11:07 am

ನರಸಿಂಹರಾಜಪುರ: 18 ವರ್ಷದಿಂದ 60 ವರ್ಷದವರೆಗಿನ ಆರೋಗ್ಯವಂತರಾದವರು ರಕ್ತದಾನ ಮಾಡಬಹುದಾಗಿದ್ದು, ಇದರಿಂದ ಹಲವು ಪ್ರಾಣಗಳನ್ನು ರಕ್ಷಿಸಿದಂತಾಗುತ್ತದೆ ಮಾತ್ರವಲ್ಲದೆ ಇಂದು ಬ್ಲಡ್ ಬ್ಯಾಂಕುಗಳಿಗೆ ರಕ್ತದ ಅವಶ್ಯಕತೆ ಇದೆ ಎಂದು ಶೃಂಗೇರಿಯ ಶಾರದಾ ಧನ್ವಂತರಿ ಚಾರಟಬಲ್ ಟ್ರಸ್ ಮುಖ್ಯಸ್ಥ ಶಾಮಸುಂದರ್ ತಿಳಿಸಿದರು.
ಅವರು ಶುಕ್ರವಾರ ಕುದುರೆಗುಂಡಿ ಅಶ್ವಗುಂಡೇಶ್ವರ ಸಮುದಾಯ ಭವನದಲ್ಲಿ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾಹಿತಿ ನೀಡಿದರು.
3 ಬ್ಲಡ್ ಬ್ಯಾಂಕ್: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಆಸ್ಪತ್ರೆ, ನರ್ಸಿಂಗ್ ಹೋಂಗಳಿದ್ದರೂ ಜಿಲ್ಲೆಯಲ್ಲಿ 3 ಬ್ಲಡ್ ಬ್ಯಾಂಕ್ ಮಾತ್ರ ಇದೆ. ರಕ್ತದಿಂದ ಹರಡುವ ಖಾಯಿಲೆಗಳಿಂದಾಗಿ ಹಲವು ನಿಬಂಧನೆ ಇರುವುದರಿಂದ ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಹಿಂಜರಿಯುತ್ತಾರೆ. ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಬ್ಲಡ್ ಬ್ಯಾಂಕ್ ನಡೆಸುತ್ತಾ ಬಂದಿದ್ದು, ನಮಗೆ ಆರೋಗ್ಯವಂತರ ರಕ್ತದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವಜನರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಸ.ಪ್ರ. ದ. ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಸಿ. ವೆಂಕಟೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೀತೂರು ಕುದುರೆಗುಂಡಿ ರೋಟಿರಿ ಸಮುದಾಯ ದಳದ ಅಧ್ಯಕ್ಷ ಎಸ್. ಉಪೇಂದ್ರರಾವ್, ಕಾರ್ಯದರ್ಶಿ ರಾಗೋಡು ವಿಶ್ವನಾಥ್, ಕಾಲೇಜಿನ ರೆಡ್ ಕ್ರಾಸ್ ಸಂಸ್ಥೆಯ ಡಾ. ಪ್ರಸನ್ನ ಕುಮಾರ್, ಸಹ ಪ್ರಾಧ್ಯಾಪಕ ವಿಜೇಂದ್ರ, ಎನ್ನೆಸ್ಸೆಸ್ ಶಿಬಿರಾಧಿಕಾರಿ ಎಸ್.ಎ. ನರಸಿಂಹ, ಪುಟ್ಟಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಎಸ್.ಎ.ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಬಿರವನ್ನು ಸ.ಪ್ರ.ದ. ಕಾಲೇಜಿನ ಎನ್.ಎಸ್.ಎಸ್. ಘಟಕ, ಭಾರತೀಯ ರೆಡ್ ಕ್ರಾಸ್‌ಸಂಸ್ಥೆ, ಸೀತೂರು ರೋಟರಿ ಹಾಗೂ ಶೃಂಗೇರಿ ಶಾರದಾ ಧನ್ವಂತರಿ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದವು. 76 ಜನರು ರಕ್ತ ಪರೀಕ್ಷೆ ಮಾಡಿಸಿಕೊಂಡಿದ್ದು, 40 ಜನರು ರಕ್ತದಾನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement