ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜ್ಯಮಟ್ಟದ ಹಾಡುಹಬ್ಬ ಸಮಾರೋಪ

Lingaraj Badiger
Updated On : 22 Feb 2014, 11:02 am

ಶೃಂಗೇರಿ: ಕನ್ನಡ ಸಾಹಿತ್ಯ, ಪರಂಪರೆಯನ್ನು ಹಾಡಿನ ಮೂಲಕ ತಿಳಿಸುತ್ತ ಬಂದಿರುವ ಸುಗಮ ಸಂಗೀತವು ಕನ್ನಡ ಸಾಹಿತ್ಯ ಪರಂಪರೆಯ ಮೆರವಣಿಗೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಪಟ್ಟಣದ ಡಾ. ಗೌರೀಶಂಕರ ಸಭಾಂಗಣದಲ್ಲಿ ಬೆಂಗಳೂರಿನ ಉಪಾಸನಾ ಟ್ರಸ್ಟ್ ಹಾಗೂ ಕೊಪ್ಪ- ಶೃಂಗೇರಿಯ ನಾದಬ್ರಹ್ಮ ಸಂಗೀತ ಶಾಲೆ ಎರಡು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಹಾಡುಹಬ್ಬ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂತಹ ಕಾರ್ಯಕ್ರಮಗಳ ಮೂಲಕ ಸಾಹಿತ್ಯ, ಸಂಗೀತ, ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ ನಾರಾಯಣ್, ಸುಗಮ ಸಂಗೀತ ಕೇವಲ ಮನರಂಜನೆ ಮಾಧ್ಯಮವಾಗಿರದೆ ಸಾಹಿತ್ಯದ ಸಾಂಗತ್ಯ, ಸೌಂದರ್ಯ ಗ್ರಹಿಸುವ ವಾಹಕವಾಗಿದೆ ಎಂದರು.
ಉಪಾಸನಾ ಮೋಹನ್, ಎಂ.ಕೆ. ನಿಧಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎಸ್. ನಯನ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement