ರೈಲು ನಿಲ್ದಾಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ
ಸಖರಾಯಪಟ್ಟಣ: ಸರ್ಕಾರದ ಅನೇಕ ಯೋಜನೆಗಳ ಅನುದಾನವನ್ನು ಗ್ರಾಮಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆಯಾಗಲು ಪಕ್ಷಾತೀತವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಿ ಕೈಜೋಡಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಹೇಳಿದ್ದಾರೆ.
ಸಖರಾಯಪಟ್ಟಣ ಗ್ರಾಮದಲ್ಲಿ ರೈಲು ನಿಲ್ದಾಣದ ರಸ್ತೆ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಕೋಟ್ಯಂತರ ರುಪಾಯಿ ಅನುದಾನ ಬರುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಖಾತ್ರಿ ಯೋಜನೆಯಡಿ 5 ಲಕ್ಷ ವೆಚ್ಚದಡಿ ರೇಲು ನಿಲ್ದಾಣದ ರಸ್ತೆ ಕಾಮಗಾರಿ ನಿರ್ಮಿಸಲಾಗುತ್ತಿದೆ. ಜಿಪಂ ಮಾಜಿ ಸದಸ್ಯ ಚಂದ್ರಪ್ಪ, ಮುಖಂಡರಾದ ಕಲ್ಮರುಡಪ್ಪ, ಮಾಸ್ಟರ್ ಚಂದ್ರಶೇಖರ್, ಗ್ರಾಪಂ ಸದಸ್ಯರಾದ ಗಿರಿರಾಜ ಅರಸ್, ಪ್ರತಿಮಾ, ಮಂಜುಳಾ, ಮೋಹನ್ ಕುಮಾರ್, ಗೌರಮ್ಮ, ಸುಮಿತ್ರಮ್ಮ, ನಿಂಗಮ್ಮ ಮೊದಲಾದವರು ಉಪಸ್ಥಿತರಿದ್ದರು.