ಅಷ್ಠ ಶತಮಾನೋತ್ಸವಅಮೃತೋತ್ಸವ ಉದ್ಘಾಟನೆ
ಕ.ಪ್ರ.ವಾರ್ತೆ, ತರೀಕೆರೆ,ಫೆ.22
ಪಾನನಿಷೇಧ ಕುರಿತು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ಸಿರಿಗೆರೆ ಬೃಹನ್ಮಠ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದ್ದಾರೆ.
ಅವರು, ತರೀಕೆರೆ ತಾಲೂಕು ದರ್ಶನ, ತಾ.ಪಂ. ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಮೀಪದ ಅಮೃತಾಪುರ ಗ್ರಾಮದಲ್ಲಿ ಶ್ರೀ ಅಮೃತೇಶ್ವರಸ್ವಾಮಿ ದೇವಾಲಯದ ಅಷ್ಠ ಶತಮಾನೋತ್ಸವ-ಅಮೃತೋತ್ಸವ ಮತ್ತು ಶ್ರೀ ಶಾರದ ದೇವಿಯವರ ವಿಗ್ರಹ ಪುನರ್ ಪ್ರತಿಷ್ಠಾಪನ ಮಹೋತ್ಸವ-ಅಮೃತೋತ್ಸವ-2014 ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಕುಡಿಯುವುದು ಈಗ ಶಿಷ್ಟಾಚಾರವಾಗಿಬಿಟ್ಟಿದೆ. ಹಿಂದಿನ ಧಾರ್ಮಿಕ ನಂಬಿಕೆಗೂ ಈಗೀನ ಶಿಷ್ಟಾಚಾರಕ್ಕೂ ಬಹಳ ವ್ಯತ್ಯಾಸವಿದೆ, ನಮ್ಮ ನಡವಳಿಕೆಗಳಲ್ಲಿ ಪ್ರಾಚೀನ ಸಂಸ್ಕೃತಿಯನ್ನು ಮತ್ತೆ ತರಬೇಕು, ನಿಜವಾದ ಮನಃಶಾಂತಿ ಅಂತರಗದಲ್ಲಿದೆ ಎಂದರು.
ನಂಬಿಕೆ ಹೋಗಿಲ್ಲ: ವಿಧಾನ ಪರಿಷತ್ ಉಪ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮಾತನಾಡಿ ದೇವಸ್ಥಾನ ಮತ್ತು ನಮ್ಮ ಇತಿಹಾಸದ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ, ಹೊರ ದೇಶಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸ ಪಡೆದಿದ್ದರೂ, ಅಲ್ಲಿ ಅನೇಕ ರೀತಿಯ ಬದಲಾವಣೆ ಆಗಿದೆ, ಆದರೆ ನಮ್ಮ ಭಾರತ ದೇಶದಲ್ಲಿ ಮಾತ್ರ ಇತಿಹಾಸದ ನಂಬಿಕೆ ಹೋಗಿಲ್ಲ, ಆದೇ ಈಶ್ವರ, ಶಾರದೆ, ಅದೇ
ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾದಿಕೆರೆ ಭಾಗದ ಎಲ್ಲ ಕೆರೆಗಳಿಗೂ ನೀರುಣಿಸಲು ಸರ್ಕಾರ ಕೂಡ ಒಪ್ಪಿಗೆ ನೀಡಿದೆ, ಅಮೃತಾಪುರಕ್ಕೆ ಆಯುಷ್ ಆಸ್ಪತ್ರೆ ಹೊಸದಾಗಿ ಪ್ರಾರಂಭಿಸಲಾಗುತ್ತದೆ ಎಂದರು.
ಸಾಹಿತಿ ಚಟ್ನಹಳ್ಳಿ ಮಹೇಶ್, ದೇವಸ್ಥಾನ ದಾಸೋಹ ಸಮಿತಿ ಅಧ್ಯಕ್ಷ ಎ.ಎಸ್. ಈಶ್ವರಪ್ಪ ಮಾತನಾಡಿದರು. ತಾಪಂ ಅಧ್ಯಕ್ಷ ಶಕುಂತಲ ನಾಗರಾಜ್, ಜಿ,ಪಂ.ಸದಸ್ಯ ಕೆ.ಪಿ.ಕುಮಾರ್, ಪರಮೇಶ್, ಜಿ,.ಪಂ.ಮಾಜಿ ಅಧ್ಯಕ್ಷ ದೃವಕುಮಾರ್, ಚಂದ್ರಪ್ಪ, ಅಬ್ದುಲ್ ಘನಿ ಅನ್ವರ್, ಮಂಜುನಾಥ್, ತಹಶೀಲ್ದಾರ್ ಶಿವಕುಮಾರ್ ಮತ್ತಿತರರು ಇದ್ದರು.