ಟಿವಿ ಅಥವಾ ಪತ್ರಿಕೆಗೆ ವಿಶ್ವಾಸಾರ್ಹತೆಯೇ ಮುಖ್ಯ
ಶಿವಮೊಗ್ಗ: ಪತ್ರಿಕೆ ಅಥವಾ ಟಿವಿಗೆ ಪ್ರಸಾರ- ಟಿಆರ್ಪಿಗಿಂತ ವಿಶ್ವಾಸಾರ್ಹತೆಯೇ ದೊಡ್ಡ ಮಾನದಂಡವಾಗಬೇಕು. ನಮ್ಮನ್ನು (ಪತ್ರಕರ್ತರನ್ನು) ಪಾರುಮಾಡುವುದು, ನಿರ್ದೇಶಿಸುವುದು ವಿಶ್ವಾಸಾರ್ಹತೆಯೇ ಹೊರತು ಬೇರೇನೂ ಅಲ್ಲ ಎಂದು “OÚ«ÚsÚ®Úúڒ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಹೇಳಿದರು.
ನಗರದಲ್ಲಿ ಶನಿವಾರ ಸಂಜೆ ಕರ್ನಾಟಕ ಸಂಘ ಆಯೋಜಿಸಿದ್ದ -ತಿಂಗಳ ಅತಿಥಿ- ಕಾರ್ಯಕ್ರಮದಲ್ಲಿ ಅವರು “®Ú~ÃOæàÞ¥ÚÀÈÚß’ ವಿಷಯವಾಗಿ ಉಪನ್ಯಾಸ ನೀಡಿ, ಬೇರೆ ಯಾರೋ ಬಂದು ನಮ್ಮ ತಲೆ ಮೇಲೆ ಕುಳಿತು ನಿಯಂತ್ರಿಸುವುದಕ್ಕಿಂತ ಸ್ವನಿಯಂತ್ರಣ ಸೂಕ್ತ ಎಂದು ಅಭಿಪ್ರಾಯಪಟ್ಟರು.
ಒಳ್ಳೆ ಕಾರ್ಯಕ್ರಮ ನೋಡುವವರಿಲ್ಲ: ಪತ್ರಿಕೆ ಹೊರತರುವುದು ಎಂದರೆ ಸೇವೆ ಎಂಬ ಕಾಲ ಇತ್ತು. ಈಗ ಇದು ದೊಡ್ಡ ವ್ಯಾಪಾರವಾದಂತಾಗಿದೆ ಎಂದ ಅವರು, ಇಂದು ಟಿವಿಗಳಲ್ಲಿ ಕೀಳು ಅಭಿರುಚಿಯ, ಸೆನ್ಸೇಷನಲ್ ಸುದ್ದಿಗಳನ್ನು ತೋರಿಸದಿದ್ದರೆ ಟಿಆರ್ಪಿ ಸಿಗುವುದೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿರುವುದು ದುರಂತ. ಒಳ್ಳೆಯ ಕಾರ್ಯಕ್ರಮಗಳನ್ನು ನೋಡುವವರಿಲ್ಲ. ಜಾಹೀರಾತುಗಳನ್ನೇ ಆಧರಿಸಿ ನಡೆಸುವ ಸ್ಥಿತಿ ಇದ್ದು, ಏನು ಮಾಡಬೇಕು ಎಂದು ಗೊತ್ತಾಗದ ಸ್ಥಿತಿ ಇದೆ ಎಂದು ವಿಷಾಧಿಸಿದರು.
ಗಂಡ- ಹೆಂಡತಿ ಜಗಳವನ್ನು ತೋರಿಸಬೇಕು ಎಂಬ ಉದ್ದೇಶ ಯಾರಿಗೂ ಇರುವುದಿಲ್ಲ. ಆದರೆ, ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಾಗ ಜನರು ಸ್ವೀಕರಿಸದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಪೂರಕವಾಗಿ ಅಂಕಿಅಂಶಗಳನ್ನು ಮುಂದಿಟ್ಟ ಅವರು, ಇವತ್ತು ಒಂದು ದಿನಪತ್ರಿಕೆಯ ಉತ್ಪಾದನಾ ವೆಚ್ಚ 20. ಆದರೆ, 3ಗೆ ಅದನ್ನು ಜನರಿಗೆ ತಲುಪಿಸಲಾಗುತ್ತಿದೆ. ಟಿವಿ ಚಾನಲ್ಗಳು ಉಚಿತವಾಗಿ ವೀಕ್ಷಣೆಗೆ ಲಭ್ಯ ಇವೆ. ಪ್ರಪಂಚದಲ್ಲಿ ಎಲ್ಲಾ ವಸ್ತುಗಳ ಬೆಲೆ ಕಾಲಕಾಲಕ್ಕೆ ಹೆಚ್ಚಾದರೆ ಪತ್ರಿಕೆಗಳ ಬೆಲೆ ಮಾತ್ರ ಕಡಿಮೆಯಾಗಿದೆ. ಜಾಹೀರಾತುಗಳನ್ನೇ ಆಧರಿಸಿ ನಡೆಸುವ ಅನಿವಾರ್ಯ ಪರಿಸ್ಥಿತಿ ಇದೆ ಎಂದರು.
ರಾಜ್ಯದಲ್ಲಿ 6 ಕೋಟಿ ಜನರಿದ್ದರೆ ಎಲ್ಲಾ ಪತ್ರಿಕೆಗಳ ಪ್ರಸಾರ ಸಂಖ್ಯೆ 20 ಲಕ್ಷ ಇದೆ. ಆದರೆ, ಕೇರಳದಲ್ಲಿ 4 ಕೋಟಿ ಜನಸಂಖ್ಯೆಗೆ 40 ಲಕ್ಷ ಪ್ರಸಾರವಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾಜದ ಪ್ರತಿಬಿಂಬ: ಪತ್ರಿಕೆಗಳು ಸಮಾಜದ ಪ್ರತಿಬಿಂಬ. ಪತ್ರಿಕೆಗಳನ್ನು ನೋಡಿ ನಾವು ಸಮಾಜ ಹೇಗಿದೆ ಎಂದು ತಿಳಿಯಬಹುದು. ಐಸ್ ಲ್ಯಾಂಡ್ ದೇಶದಲ್ಲಿ ಯಾವ ಪತ್ರಿಕೆಗಳಲ್ಲೂ ಅಪರಾಧ ಸುದ್ದಿಗಳೇ ಇರುವುದಿಲ್ಲ. ಏಕೆಂದರೆ ಆ ಆದೇಶದಲ್ಲಿ ಕೊಲೆಯೊಂದರ ಘಟನೆ ನಡೆದು 32 ವರ್ಷ, ಅತ್ಯಾಚಾರ ಘಟನೆ ನಡೆದು 42 ವರ್ಷಗಳಾಗಿವೆ. ರುವಾಂಡದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಗಲಭೆ ಬಿಟ್ಟರೆ ಬೇರೆ ಅಪರಾಧ ಸುದ್ದಿಗಳೂ ಇಲ್ಲ ಎಂದರು.
ಪತ್ರಕರ್ತ ಋಣಾತ್ಮಕವಾಗಿ ಯೋಚನೆ ಮಾಡುತ್ತಾನೆ ಎಂದು ತಿಳಿಯುವುದಕ್ಕಿಂತ, ಆತನನ್ನು ಆತ ಬರೆಯುವ ಸುದ್ದಿ ನಿರ್ದೇಶಿಸುತ್ತಿರುತ್ತದೆ ಎಂದು ಭಾವಿಸುವುದು ಸೂಕ್ತ. ಹೆಚ್ಚು ಮಾಹಿತಿಗಳನ್ನು ಜನರಿಗೆ ನೀಡುವ ತವಕ ಆತನಲ್ಲಿ ಇರುತ್ತದೆ ಎಂದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿವಿಧ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಡಾ. ನಾಗಭೂಷಣ್ ಸ್ವಾಗತಿಸಿದರು. ವೆಂಕಟೇಶ್ ನಿರೂಪಿಸಿದರು.