ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮನ್ವಯದ ಬದುಕಿಗೆ ಸ್ಕೌಟ್ಸ್ ಪ್ರೇರಣಾ ಶಕ್ತಿ

Vishwanath S
Updated On : 24 Feb 2014, 11:33 am

ಶೃಂಗೇರಿ: ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ ಕಲಿಸುವುದರ ಜೊತೆಗೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಮನ್ವಯದ ಬದುಕಿಗೆ ಪ್ರೇರಣಾಶಕ್ತಿಯಾಗಿದೆ ಎಂದು ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಶಿವಶಂಕರ್ ಹೇಳಿದರು.
ಅವರು ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮತಾ ತತ್ವ: ಮಕ್ಕಳ ಸಮುದಾಯದ ಶಿಸ್ತು, ಸಾಮರ್ಥ್ಯ, ಸಂಘಟನೆ, ಸೇವಾ ಮನೋಭಾವನೆ ಬೆಳೆಸುವುದರ ಜೊತೆಗೆ ಸಮತಾ ತತ್ವಗಳನ್ನು ಮೂಡಿಸುತ್ತದೆ. ವಿಶ್ವಶಾಂತಿ, ಸಮಾನತೆ, ಭ್ರಾತೃತ್ವ ಭಾವನೆ ಉಂಟುಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುವ ಕಲೆ ಜೊತೆಗೆ ಸಮಾಜದಲ್ಲಿ ಜವಾಬ್ದಾರಿಯುತ ಹಾಗೂ ಗೌರವಾನ್ವಿತ ಜೀವನ ನಡೆಸಲು ಕಲಿಸುತ್ತದೆ ಎಂದರು.
ದೇಶದ ಸ್ವಾಂತಂತ್ರ್ಯ ಚಳುವಳಿಯಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ. ದೇಶಾಭಿಮಾನ, ಐಕ್ಯತೆ ಮೂಡಿಸುವಲ್ಲಿ ವಿದ್ಯಾರ್ಥಿ ಸಮುದಾಯದ ಮೇಲೆ ತನ್ನದೇ ಆದ ಪ್ರಭಾವ ಬೀರಿತ್ತು. ಇಂದು ಈ ಸಂಘಟನೆ ವಿಶ್ವವ್ಯಾಪಿಯಾಗಿರುವ ಒಂದು ಯುವ ಜನಾಂಗದ ಒಕ್ಕೂಟವಾಗಿದೆ ಎಂದರು.
ಕಾಲೇಜು ಉಪಪ್ರಾಚಾರ್ಯ ವಿಜಯ್ ಕುಮಾರ್, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನೂತನ್ ಕುಮಾರ್, ನಾಗಲಕ್ಷ್ಮಿ, ಎಚ್.ಎಂ. ಮಂಜುನಾಥ ಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement