ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಶು ಆಹಾರ ಘಟಕ ಲೋಕಾರ್ಪಣೆ

Vishwanath S
Updated On : 25 Feb 2014, 11:36 am

ಕ.ಪ್ರ.ವಾರ್ತೆ ,  ಶಿಕಾರಿಪುರ ,  ಫೆ. 24
ಗ್ರಾಮೀಣ ಪ್ರದೇಶದಿಂದ ಪಟ್ಟಣದೆಡೆಗೆ ಯುವಪೀಳಿಗೆಯ ವಲಸೆಯನ್ನು ತಡೆದು ಉದ್ಯೋಗ ಸೃಷ್ಟಿಸಿ ದುಡಿಯುವ ಕೈಗೆ ಕೆಲಸಕ್ಕೆ ಕೈಗಾರಿಕೆಗಳು ಅತ್ಯಗತ್ಯವಾಗಿದ್ದು, ಈ ದಿಸೆಯಲ್ಲಿ ತಾಲೂಕಿನ ಸಂಡ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ರೀತಿಯ ಹತ್ತಾರು ಕೈಗಾರಿಕೆಗಳ ಆರಂಭಕ್ಕೆ ಪ್ರಯತ್ನಿಸುವುದಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಶಾಸಕ ಯಡಿಯೂರಪ್ಪ ತಿಳಿಸಿದರು.
ಸೋಮವಾರ ತಾಲೂಕಿನ ಸಂಡ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಅಂದಾಜು 45 ಕೋಟಿ ವೆಚ್ಚದಲ್ಲಿ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆ.ಎಂ.ಎಫ್) ವತಿಯಿಂದ ನಿರ್ಮಾಣವಾದ ನೂತನ ಪಶು ಆಹಾರ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತೃಪ್ತಿ ತಂದಿದೆ: ರಾಜ್ಯದ ಇದುವರೆಗಿನ 4 ಘಟಕಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಶಿಕಾರಿಪುರದ ಜನತೆ ಪುರಸಭಾ ಸದಸ್ಯ, ಶಾಸಕ, ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಗೊಳಿಸಿದಕ್ಕೆ ಇದೀಗ ಸಮಾದಾನ, ತೃಪ್ತಿ ತಂದಿದೆ. ಈಗ 2 ಹಸು ಸಾಕಣೆ ಮೂಲಕ ಒಂದು ಕುಟುಂಬ ಗೌರವಯುತವಾಗಿ ಬದುಕಲು ಸಾದ್ಯವಿದೆ ಎಂದು ಅವರು ಹೇಳಿದರು.
45 ಕೋಟಿ ವೆಚ್ಚದ ಈ ಘಟಕವು 30 ಎಕರೆ ವಿಶಾಲ ಸ್ಥಳದಲ್ಲಿದೆ. 300 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ಅಲ್ಲದೆ ನಿತ್ಯ 9 ಸಾವಿರ ಮೆ.ಟನ್ ಕಚ್ಚಾ ಆಹಾರ ದಾಸ್ತಾನು ಸಾಮರ್ಥ್ಯದ ಗೋದಾಮು ಹೊಂದಿದೆ.
ಕ್ಷೀರ ಕ್ರಾಂತಿ: ಕುಟುಂಬದ ಪೋಷಣೆಯಲ್ಲಿ ಪುರುಷರಿಗಿಂತ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು ಈ ದಿಸೆಯಲ್ಲಿ ಹಾಲಿಗೆ ಪ್ರೋತ್ಸಾಹ ಧನ ನೀಡಿದ ಪರಿಣಾಮ ಇದೀಗ ಕ್ಷೀರ ಕ್ರಾಂತಿಯಾಗಿದೆ. ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಕ್ಕಾಗಿ ಹಾಲು ನೀಡುವ ತೀರ್ಮಾನವನ್ನು ಅವರು ಶ್ಲಾಘಿಸಿದರು.
ರಾಜ್ಯದ 7.5 ಲಕ್ಷ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು 55 ಲಕ್ಷ ಲೀ.ಹಾಲು ನಿತ್ಯ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದು ಪಶು ಆಹಾರ ಘಟಕದ ಆರಂಭದಿಂದ ಸಾಗಾಣಿಕೆ ವೆಚ್ಚ ಕಡಿಮೆಯಾಗುವ ಜತೆಗೆ ಸ್ಥಳೀಯ ರೈತರ ಜೋಳಕ್ಕೆ ಉತ್ತಮ ಬೆಲೆ ದೊರಕಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement