ಮಾ. 5ರಿಂದ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಬಾಳೆಹೊನ್ನೂರು: ಅನಿವಾರ್ಯ ಕಾರಣಗಳಿಂದ ಮುಂದೂಡಿದ್ದ ಬಾಳೆಹೊನ್ನೂರಿನಲ್ಲಿ ನಡೆಯಬೇಕಿದ್ದ ನರಸಿಂಹರಾಜಪುರ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ. 5, 6 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಹೇಳಿದ್ದಾರೆ.
ಇಲ್ಲಿನ ರೋಟರಿ ಭವನದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಫೆ. 14, 15 ರಂದು ಪಟ್ಟಣದಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು. ಮಾ. 5, 6 ರಂದು ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು, ಈ ಹಿಂದೆ ನಿಗದಿಪಡಿಸಿದ ಸಮಯದಂತೆ ನಡೆಸಲಾಗುವುದು ಎಂದು ತಿಳಿಸಿದರು.
ನುಡಿಚಿತ್ರ ಸಂಗ್ರಾಹಕ ಶಂ.ನ. ಶೇಷಗಿರಿ ನುಡಿಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ಪುಸ್ತಕ ಹಾಗೂ ಇನ್ನಿತರೆ ಮಾರಾಟ ಮಳಿಗೆ ತೆರೆಯಲು ಅವಕಾಶವಿದ್ದು, ಮಳಿಗೆ ತೆರೆಯಲಿಚ್ಛಿಸುವವರು ಮಾ. 2ರೊಳಗೆ ನೋಂದಾಯಿಸಿಕೊಳ್ಳಬಹುದು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಬಿ.ಸಿ. ಗೀತಾ, ಉಪಾಧ್ಯಕ್ಷ ಕೆ.ಟಿ. ವೆಂಕಟೇಶ್, ಕಸಾಪ ಹೋಬಳಿ ಅಧ್ಯಕ್ಷ ರಾ. ವೆಂಕಟೇಶ್, ಲೆಕ್ಕ ಪರಿಶೋಧಕ ಕೃಷ್ಣಭಟ್ ಉಪಸ್ಥಿತರಿದ್ದರು.
ಸ.ನೌ.ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ತಿಪ್ಪೇಶಪ್ಪ
ತರೀಕೆರೆ: ಸರ್ಕಾರಿ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಟಿ.ತಿಪ್ಪೇಶಪ್ಪ, ಉಪಾಧ್ಯಕ್ಷರಾಗಿ ಟಿ.ಕರಿಬಸಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಬಾವಣ್ಣನವರ್ ಘೋಷಿಸಿದ್ದಾರೆ. ರಾಜ್ಯ ಸ.ನೌ.ಸಂಘದ ಅಧ್ಯಕ್ಷ ಎಂ.ಬಿ.ರಾಮಚಂದ್ರಪ್ಪ ಹಾಗೂ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದು ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದರು.
ನೂತನ ಅಧ್ಯಕ್ಷ ಎಸ್.ಟಿ.ತಿಪ್ಪೇಶಪ್ಪ ಅವರು ಮಾತನಾಡಿ ಸಹಕಾರ ಸಂಘದಲ್ಲಿ ಹೆಚ್ಚು ಸದಸ್ಯರನ್ನು ನೊಂದಾಯಿಸಬೇಕು ಎಂಬ ಉದ್ದೇಶವಿದೆ ಹಾಗೂ ದಿ.ಮಹದೇವಪ್ಪನವರ ಆಶಯದಂತೆ ಈ ಸಹಕಾರ ಸಂಘದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ರಾಜ್ಯ ಸ.ನೌ.ಸಂಘದ ಅಧ್ಯಕ್ಷ ಎಂ.ಬಿ.ರಾಮಚಂದ್ರಪ್ಪ, ನೂತನ ಉಪಾಧ್ಯಕ್ಷ ಟಿ.ಕರಿಬಸಪ್ಪ, ನಿರ್ದೇಶಕರಾದ ಟಿ.ಎಚ್.ಹಾಲವಜ್ರಪ್ಪ, ಟಿ.ಚಂದ್ರಪ್ಪ, ಕಾರ್ಯದರ್ಶಿ ಕೆ.ಮಂಜಪ್ಪ, ರಾಜಪ್ಪ, ಮಹಾಲಕ್ಷ್ಮಿ ಭಟ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.