ಅರೆಗಂಜಿ ಕುಡಿಯವ ಕಾಡು ಜನರಿಗೆ ಹಕ್ಕು ಪತ್ರವಿಲ್ಲ: ಮೋಹನ್ ವಿಷಾದ
ಕ.ಪ್ರ.ವಾರ್ತೆ ಕೊಪ್ಪ ಫೆ. 25 ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನ ಮಲೆನಾಡಿನ ಸಮಸ್ಯೆ ಮತ್ತು ಸವಾಲುಗಳು ಗೋಷ್ಠಿ ತೀವ್ರ ಚರ್ಚೆಗಳಿಗೆ ಕಾರಣವಾಯಿತು.
ಮಲೆನಾಡ ಸಂಸ್ಕೃತಿ ಸವಾಲು ಕುರಿತು ಮಾತನಾಡಿದ ಉಪನ್ಯಾಸಕ ಶ್ರೀಪತಿ ಹಳಗುಂದ ಅರ್ಥವೇ ಆಗದ ಸಂಸ್ಕೃತ ಮಂತ್ರಗಳ ಪೂಜೆ ಪುನಸ್ಕಾರದ ಕುರಿತು ಎತ್ತಿದ ಪ್ರಶ್ನೆ ಪ್ರೇಕ್ಷಕರಲ್ಲಿ ಕೆಲವರಿಗೆ ಇರಿಸು ಮುರಿಸುತಂದಿತು.
ಅವರು ಎತ್ತಿದ ಪ್ರಶ್ನೆಗಳಿಗೆ ಅಧ್ಯಕ್ಷೀಯ ಭಾಷಣದಲ್ಲಿ ಉಪನ್ಯಾಸಕ ಡಾ. ಮೋಹನ್ ಚಂದ್ರಗುತ್ತಿ ಉತ್ತರಿಸುತ್ತಾ ಶ್ರೀಪತಿಯವರ ಮಾತುಗಳನ್ನು ಸಮರ್ಥಿಸಿಕೊಂಡರು. ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಿಂಹಪಾಲನ್ನು ಪಡೆದವರು ಹಾಕುವ ಮಾರ್ಗ ಸೂಕ್ತವೇ ಎಂಬ ಸೂಕ್ಷ್ಮ ಪ್ರಶ್ನೆ ಎತ್ತಿದರು.
ಹಕ್ಕುಪತ್ರವಿಲ್ಲ: ಸಮಾಜ ಜಾತಿ ವರ್ಗ ವ್ಯವಸ್ಥೆಯ ಸಂಚುಗಳನ್ನು ವಿವರಿಸಿದರು. ಒಂದೆರಡು ಎಕರೆ ಸಾಗುವಳಿ ಮಾಡಿ, ಅರೆಗಂಜಿ ಕುಡಿಯವ ಕಾಡು ಜನರಿಗೆ ಹಕ್ಕು ಪತ್ರವಿಲ್ಲ, ಸಾವಿರಾರು ಎಕರೆ ಕಾಡು ಸವರಿದ ಪ್ಲಾಂಟರ್ಸ್ ಗಳಿಗೆ ಯಾವ ಪತ್ರದ ಅವಶ್ಯವೂ ಇಲ್ಲ. ಇಂತವರಿಂದಲೇ ಕಾಡು ಪ್ರಾಣಿಗಳು ನಾಡಿಗೆ ಬಂದಿದ್ದು, ಇಂತವರು ಲೂಟಿ ಮಾಡಿದ ಜಾಗ ಬಿಡಿಸಿಕೊಂಡು ದುಡಿದು ತಿನ್ನುವವರಿಗೆ ಭೂಮಿ ನೀಡಬೇಕು ಎಂದು ಪ್ರತಿಪಾದಿಸಿದರು.
ಪತ್ರಕರ್ತ ಪ್ರಭಾಕರ ಕಾರಂತ ಮಾತನಾಡಿ. ಮಲೆನಾಡು ವೃದ್ಧಾಶ್ರಮವಾಗುತ್ತಿರುವುದಕ್ಕೆ ರೈತರ ದುರಾಸೆಯೇ ಪ್ರಥಮ ಕಾರಣವಾಗಿದೆ ಎಂದರು.
ಶಂ.ನ. ಶೇಷಗಿರಿ, ವಸುಮತಿ, ಎಸ್.ಮೂರ್ತಿ, ಎನ್. ಮೂರ್ತಿ, ಓಂಕಾರಪ್ಪ ಮೊದಲಾದವು ವೇದಿಕೆದಲ್ಲಿದ್ದರು.