ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಅಂಕ ಗಳಿಕೆಗಿಂತ ವೃತ್ತಿಪರ ಶಿಕ್ಷಣ ಅಗತ್ಯ'

Lingaraj Badiger
Updated On : 27 Feb 2014, 10:26 am

ನರಸಿಂಹರಾಜಪುರ: ಇಂದಿನ ಶಿಕ್ಷಣವು ಏಕಮುಖವಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಅಣ್ಣಪ್ಪ ಎನ್. ಮಳೀಮಠ್ ತಿಳಿಸಿದರು.
ಇಲ್ಲಿನ ಕಾನೂರು ಶಾಲಾ ಆವರಣದಲ್ಲಿ ಬುಧವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಚೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಕೇವಲ ಅಂಕ ಗಳಿಸುವ ಉದ್ದೇಶ ಹೊಂದಿರುವ ಶಿಕ್ಷಣ ವ್ಯವಸ್ಥೆಗಿಂತ ವೃತ್ತಿಪರ ಶಿಕ್ಷಣವು ಅಗತ್ಯ. 4 ಗೋಡೆಗಳ ಮಧ್ಯೆ ಪಡೆದ ಶಿಕ್ಷಣವು ಸಮಾಜಮುಖಿ ಚಿಂತನೆಗಳಿಗೆ ಸಹಾಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸೌಲಭ್ಯ ಸದುಪಯೋಗವಾಗಲಿ:  ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಮೇಶ್ ಮಾತನಾಡಿ, ಶಿಕ್ಷಣ ಇಲಾಖೆಯು ಜಾರಿಗೆ ತಂದ ಆರ್‌ಟಿಐ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು. ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ, ಕ್ಷೀರಭಾಗ್ಯ ಯೋಜನೆ, ಉಚಿತ ಸೈಕಲ್ ನೀಡುವ ಕಾರ್ಯಕ್ರಮಗಳಿವೆ. ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಶಿಕ್ಷಣ ಪಡೆಯುವಂತೆ ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಪೂರ್ಣೇಶ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾನೂರು ಗ್ರಾಮ ಪಂಚಾಚಯ್ತಿ ಅಧ್ಯಕ್ಷೆ ರಂಜಿತಾ, ಸದಸ್ಯರಾದ ಯು.ಎಸ್.ತಿಮ್ಮಪ್ಪ, ಭಾರತಿ, ವೀಣಾ, ಕೃಷಿಕ ರಂಗಪ್ಪಯ್ಯ, ಕೃಷಿಕರಾದ ಬಿ.ಕೆ. ನಾರಾಯಣಸ್ವಾಮಿ, ಸೂರ್ಯನಾರಾಯಣರಾವ್, ಸಂಕದಕುಣಿ ಕ್ಲಸ್ಟರ್‌ನ ಎನ್.ಪಿ. ಸುಕೇಶ್, ಕಾನೂರು ಶಾಲೆಯ ಮುಖ್ಯೋಪಾಧ್ಯಾಯ ಬಿ.ಅಣ್ಣಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ್, ಉಪನ್ಯಾಸಕ ಕೆ.ವಿ.ನಾಗರಾಜ್, ಶಿಬಿರಾಧಿಕಾರಿಗಳಾದ ಕೆ.ಉಮೇಶ್ ಉಪಸ್ಥಿತರಿದ್ದರು.
ಮುಜೀಬ್ ಖಾನ್ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಶಿಲ್ಪ, ಸುಬ್ರಮಣ್ಯ,ತಿರುಮಲೇಶ್, ಸ್ಮರಣೇಂದ್ರ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾವ್ಯ ಸ್ವಾಗತಿಸಿದರು. ಅರುಣ ನಿರೂಪಿಸಿ, ಅಬ್ದುಲ್ ವಹಾಬ್ ವಂದಿಸಿದರು.
 7 ದಿನಗಳ ಕಾಲ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ ಶಾಲಾ ಕ್ರೀಡಾಂಗಣ ಸ್ವಚ್ಛತೆ, ದೇವಸ್ಥಾನದ ಆವರಣ ಸ್ವಚ್ಛತೆ, ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement