ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೋವಿಂದೇಗೌಡರಿಗೆ ಮಾ.21ರಂದು ಅಭಿನಂದನೆ

Lingaraj Badiger
Updated On : 27 Feb 2014, 10:30 am

ಕೊಪ್ಪ: ಮಲೆನಾಡ ಗಾಂಧಿ ಎಚ್.ವಿ. ಗೋವಿಂದೇಗೌಡರಿಗೆ ಮಾ.21ರಂದು ಶೃಂಗೇರಿ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಭಿನಂದನಾ ಸಮಿತಿ ಅಧ್ಯಕ್ಷ ಮೀಗಾ ಚಂದ್ರಶೇಖರ್ ತಿಳಿಸಿದ್ದಾರೆ.
ತುಮಕೂರು ವಿವಿ ಡಾಕ್ಟರೇಟ್ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿರುವ ಗೋವಿಂದೇಗೌಡರಿಗೆ ಅವರ ಕರ್ಮಭೂಮಿಯಲ್ಲಿ ಬೆಂಬಲಿಗರು, ಅಭಿಮಾನಿಗಳು ಅಭಿನಂದಿಸಲು ನಿರ್ಧರಿಸಿದೆ ಎಂದರು.
ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಆರ್. ಗೌರೀಶಂಕರ್ ಗೌರವಾಧ್ಯಕ್ಷತೆಯಲ್ಲಿ ಅಭಿನಂದನಾ ಸಮಿತಿ ರಚಿಸಲಾಗಿದೆ. ಹೇರೂರು ಅನಂತಪದ್ಮನಾಭ ಶರ್ಮ, ಎಚ್.ಟಿ. ರಾಜೇಂದ್ರ, ನಾಗೇಶ್, ಶ್ರೀನಿವಾಸ್, ಮಂಜುನಾಥ್, ತಲವಾನೆ ಪ್ರಕಾಶ್, ಅನಿಲ್ ಕುಲಾಸೋ, ಕಾಡಪ್ಪಗೌಡ, ಸಯ್ಯದ್ ಮಹಮದ್, ಶರತ್, ಗೋಪಾಲ್, ಕೆ. ಕೃಷ್ಣ, ದಿವಾಕರ ಭಟ್, ಉಪಾಧ್ಯಕ್ಷರಾಗಿರುವ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಬಾಳೆಮನೆ ಎಚ್.ಎಂ. ನಟರಾಜ್, ಖಚಾಂಚಿಯಾಗಿ ರಾಮಪ್ಪ, ಸಂಚಾಲಕರಾಗಿ, ಶಾಂತಕುಮಾರ್, ಕಾರ್ಯದರ್ಶಿ ನಟರಾಜ್, ಕಳಸಪ್ಪ, ಮಂಜುನಾಥ್, ಸತೀಶ್ ಕಾರ್ಯನಿರ್ವಹಿಸಲಿದ್ದಾರೆಂದು ತಿಳಿಸಿದರು. ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಸನ್ಮಾನಿಸಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿನಂದನಾ ಭಾಷಣ ಮಾಡಲಿದ್ದಾರೆ. ಅಂದೇ ಭಾವಸಂಗಮ ಗೀತಾ ಗಾಯಕ ಹಾಗ ಗಂಗಾವತರಣ ನಾಟಕ ಪ್ರದರ್ಶಿಸಲಾಗುವುದೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement