ಸವಿತಾ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ಮನವಿ
ಮೂಡಿಗೆರೆ: ಸವಿತಾ ಸಮಾಜದ ಅಭಿವೃದ್ಧಿಗಾಗಿ ನೂತನ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ತಾಲೂಕು ಸವಿತಾ ಸಮಾಜದ ಕಾರ್ಯಕರ್ತರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಅರ್ಪಿಸಿದರು.
ರಾಜ್ಯದಲ್ಲಿ ಸವಿತಾ ಸಮಾಜದ ಜನರು ಪ್ರತಿನಿತ್ಯ ಶೋಷಣೆ, ದೌರ್ಜನ್ಯದಿಂದ ಬದುಕುವಂತಾಗಿದೆ. ಸಮಾಜದಲ್ಲಿ ನಮ್ಮ ಜನಾಂಗದ ಜನರನ್ನು ಅತ್ಯಂತ ಹಿನಾಯವಾಗಿ ಕಾಣುವುದು ನಡೆಯುತ್ತಿದೆ. ಆದ್ದರಿಂದ ನಮ್ಮ ಸಮಾಜದ ಏಳಿಗೆಗಾಗಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸವಿತಾ ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆ ಕುರಿತಾಗಿ ಹಿಂದುಳಿದ ವರ್ಗದ ಮಾಜಿ ಅಧ್ಯಕ್ಷ ಡಾ. ದ್ವಾರಕ ನಾಥ್ ಅಧ್ಯಕ್ಷರಾಗಿದ್ದಾಗ ಸರ್ಕಾರಕ್ಕೆ ನೀಡಿರುವ ವರದಿಯನ್ನು ಅನುಷ್ಠಾಗೊಳಿಸಬೇಕು. ಎಂದು ಆಗ್ರಹಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ನಾಯಾಯಣ್, ತಾಲೂಕು ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಶಿವು, ಪಿ.ಪಿ ನಾರಾಯಣ್, ನಾಗೇಶ್, ಎಲ್.ಯು. ಮಂಜುನಾಥ್, ಸುಧಾಕರ್, ಮಹೇಶ್, ಶಶಿಧರ್, ಜಿ.ಎಸ್. ಮೊದಲಾದವರು ಇದ್ದರು.