ನರಸಿಂಹರಾಜಪುರ ತಾಲೂಕಿನಲ್ಲಿ ಶ್ರದ್ಧಾ-ಭಕ್ತಿಯ ಶಿವಾರಾಧನೆ
ನರಸಿಂಹರಾಜಪುರ: ತಾಲೂಕಿನ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ಗುರುವಾರ ಶಿವರಾತ್ರಿ ಪ್ರಯಕ್ತ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು.
ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ ವಿಶೇಷ ಪೂಜೆ ನಡೆಯಿತು. ಸಂಜೆ ಲಲಿತ ಭಜನಾ ಮಂಡಳಿಯವರಿಂದ ಭಜನೆ, ಶಿವ ಸಹಸ್ರ ನಾಮ ನಡೆಯಿತು. ಹಳೇ ಮಂಡಗದ್ದೆ ಸರ್ಕಲ್‌ನಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಿತು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭದ್ರಾವತಿ ವಿಕ್ರಂ ಮೆಲೋಡಿ ಅುವರಿಂದ ಆರ್ಕೇಸ್ಟ್ರಾ ನಡೆಯಿತು.
ಕೊಟ್ಟೂರು ಬಸವೇಶ್ವರ ದೇವಸ್ಥಾನ, ಹೆಬ್ಬೆ ಭವಾನಿ ಶಂಕರ ದೇವಸ್ಥಾನ, ಕುದುರೆಗುಂಡಿ ಅಶ್ವಗುಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಯಡಗೆರೆ ರಾಮನಾಥೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ,ರಂಗಪೂಜೆ ನಡೆಯಿತು.
ಗಂಗಾ ಜಲ ವಿತರಣೆ: ಮುಜರಾಯಿ ಇಲಾಖೆಯಿಂದ ಬಂದಿದ್ದ ಗಂಗಾ ಜಲವನ್ನು ಉಮಾಮೇಶ್ವರ ದೇವಸ್ಥಾನ, ಸುಬ್ರಮಣ್ಯಸ್ವಾಮಿ ದೇವಸ್ಥಾನ, ಹಳೇ ಮಂಡಗದ್ದೆ ಸರ್ಕಲ್ ಈಶ್ವರ ದೇವಸ್ಥಾನ, ಹೆಬ್ಬೆ ಭವಾನಿ ಶಂಕರ ದೇವಸ್ಥಾನ ಹಾಗೂ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ತಾಲೂಕು ಕಚೇರಿಯಿಂದ ವಿತರಿಸಲಾಯಿತು.