ತುಳು ಕೂಟಕ್ಕೆ 'ಸೇವಾರತ್ನ' ಪ್ರಶಸ್ತಿ
ಮೂಡಿಗೆರೆ: ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿ ಮೀರಜ್‌ನಲ್ಲಿ ನಡೆದ ಅಖಿಲ ಭಾರತ ತುಳು ಒಕ್ಕೂಟ ಸಮಾರಂಭದಲ್ಲಿ ಮೂಡಿಗೆರೆ ತುಳು ಕೂಟದ ಸೇವೆಯನ್ನು ಸ್ಮರಿಸಿ ತುಳು ಕೂಟದ ಅಧ್ಯಕ್ಷ ದಿವಾಕರ್ ಶೆಟ್ಟಿ ಅವರು ಮೂಡಿಗೆರೆ ತುಳುಕೂಟಕ್ಕೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಮೂಡಿಗೆರೆ ತುಳುಕೂಟದ ಅಧ್ಯಕ್ಷ ನರೇಂದ್ರ ಶೆಟ್ಟಿ ಮೂಡಿಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಲೆನಾಡಿನಲ್ಲಿ ತುಳುಭಾಷಿತರೇ ಹಚ್ಚಾಗಿದ್ದು, ವ್ಯಾಪಾರಸ್ಥರು, ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು ಹೆಚ್ಚಿನವರು ತುಳುವರು ಆಗಿ ದ್ದಾರೆ. ಮೂಡಿಗೆರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಕೂ ತುಳು ಕೂಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಭೂತ ಕೋಲ, ನಾಗಮಂಡಲದಂತ ಕಾರ್ಯಕ್ರಮಗಳು ತುಳುವರ ಸಂಪ್ರದಾಯದ ಬಗ್ಗೆ ಮಲೆನಾಡಿನ ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿದ್ದು ಯಶಸ್ಸನ್ನು ಸಾಧಿಸಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಅತುತ್ ರಾವ್, ಜನಾರ್ಧನ ಶೆಟ್ಟಿ, ವಸಂತ್ ಎಸ್. ಪೂಜಾರ್ ಉಪಸ್ಥಿತರಿದ್ದರು.