6ರಂದು ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ
ತರೀಕೆರೆ: ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಜ.6ರಂದು ಪಟ್ಟಣದ ಇತಿಹಾಸ ಪ್ರಸಿದ್ಧ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ 121ನೇ ರಥೋತ್ಸವನ್ನು ಏರ್ಪಡಿಸಲಾಗಿದೆ. ಶ್ರೀ ಸುಬ್ರಹ್ಮಣ್ಯ ಹೋಮ, ದಿಗ್ಬಲಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರ ರಥಾರೋಹಣ ಮಹಾ ಮಂಗಳಾರತಿ, ಸಾಯಂಕಾಲ ಉಯ್ಯಾಲೆ ಸೇವೆ, ಗ್ರಾಮದೊಳಗೆ ಹೂವಿನ ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಅಷ್ಟಾವಧನ ಸೇವೆ, ತೊಟ್ಟಿಲ ಸೇವೆ ಮತ್ತು ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ. ರಥೋತ್ಸವದ ಅಂಗವಾಗಿ ಭಾರತ ವಾಚನ ಮತ್ತು ವ್ಯಾಖ್ಯಾನ, 3 ರಂದು ಹರಿಕಥೆ, ಭಜನಾ ಸ್ಪರ್ಧೆ, 4ರಂದು ಸೂತ್ರದ ಗೊಂಬೆಯಾಟ ಪ್ರದರ್ಶನ, 5ರಂದು ಬೆಳಗ್ಗೆ 11 ಗಂಟೆಗೆ ಸಂಸ್ಮರಣೆ ದಿನಾಚರಣೆ, ಸಂಜೆ ಪ್ರತಿಭಾ ಪುರಸ್ಕಾರ, ಭರತನಾಟ್ಯ, 6ರಂದು ಹೂವಿನ ಅಲಂಕಾರ, 7ರಂದು ಸಂಗೀತ ಗಾಯನ, 8ರಂದು ವೀಣಾ ವಾದನ, ಭರತ ನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.