ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎಮ್ಮೇದೊಡ್ಡಿಗೆ ಸಂತೆ ಭಾಗ್ಯ: ಸಂತಸ

Rashmi Kasaragodu
Updated On : 4 Jan 2014, 11:44 am

ಕ.ಪ್ರ.ವಾರ್ತೆ, ಕಡೂರು, ಜ.3
ತಾಲೂಕಿನ ಎಮ್ಮೇದೊಡ್ಡಿ ವ್ಯಾಪ್ತಿಗೆ ಬರುವ ಸುಮಾರು 29 ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಮೊದಲ ಬಾರಿಗೆ ಆರಂಭಿಸಿದ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಯಶಸ್ವಿಯಾಯಿತು.
ಎಮ್ಮೇದೊಡ್ಡಿ ಪಂಚಾಯ್ತಿ ವ್ಯಾಪ್ತಿಗೆ ಬರುವ ಗಾಂಧಿನಗರ, ಮುಸ್ಲಾಪುರದ ಹಟ್ಟಿ, ಗೊಲ್ಲರಹಟ್ಟಿ, ಚಿಕ್ಕಾಲಘಟ್ಟ, ಶಿವಪುರ, ಸಿದ್ದರಹಳ್ಳಿ ಸೇರಿದಂತೆ ಹಲವು ಹಳ್ಳಿಗಳು ಸೇರುವ ಈ ಗ್ರಾಪಂ ವ್ಯಾಪ್ತಿಯ ಜನರು ಕಡೂರು ಬೀರೂರು ಸಂತೆಗೆ ಬರಲು 17ರಿಂದ 25 ಕಿ.ಮೀ. ಕ್ರಮಿಸಬೇಕಾಗಿತ್ತು.
ಸಂತೆಗೆ ಚಾಲನೆ: ಇದೀಗ ಕಾಲ ಕೂಡಿ ಬರುವ ಮೂಲಕ ಮುಸ್ಲಾಪುರದ ಹಟ್ಟಿಯಲ್ಲಿ ಆರಂಭಗೊಂಡ ಸಂತೆಯನ್ನು  ಔಪಚಾರಿಕವಾಗಿ ಎಮ್ಮೇದೊಡ್ಡಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ನಾಗರಾಜ್, ಗ್ರಾಪಂ ಉಪಾಧ್ಯಕ್ಷರಾದ ನೀಲಾವತಿ ಕುಟ್ಟಿ, ವಾರ್ಡ್ ಸದಸ್ಯೆ ಬೇಬಿಬಾಯಿ ಮತ್ತು ಸದಸ್ಯರ ನೇತೃತ್ವದಲ್ಲಿ ಸಂತೆ ಆರಂಭಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಮತ್ತು ಮುಖಂಡ ರಮೇಶನಾಯ್ಕ ಮಾತನಾಡಿ, ತೀರಾ ಹಿಂದುಳಿದ ಪ್ರದೇಶವಾಗಿರುವ ಎಮ್ಮೇದೊಡ್ಡಿ ಪ್ರದೇಶದಲ್ಲಿ ಮೂಲ ಸವಲತ್ತು ಒದಗಿಸಲು ಸಂತೆ ಆರಂಭಿಸಿದ್ದು ಸ್ವಾಗತಾರ್ಹ ಎಂದರು.
ಪ್ರತೀವಾರ ಸಂತೆ: ಇದರಿಂದ ಸುಮಾರು 29ಕ್ಕೂ ಹೆಚ್ಚು ಗ್ರಾಮಗಳನ್ನು ಪ್ರತಿನಿಧಿಸುವ ಎಮ್ಮೇದೊಡ್ಡಿಯ ಮುಸ್ಲಾಪುರದ ಹಟ್ಟಿಯಲ್ಲಿ ಇನ್ನು ಮುಂದೆ ಪ್ರತೀವಾರ ಸಂತೆ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಲಚ್ಚಾನಾಯ್ಕ, ನಿರ್ದೇಶಕ ರಮೇಶ್, ಗ್ರಾಪಂ ಸದಸ್ಯ  ಲೋಕೇಶ್, ಸತ್ಯನಾರಾಯಣ, ನಾನಾನಾಯ್ಕ,  ಚಂದ್ರಪ್ಪ, ಸಿದ್ದಮ್ಮ, ಕುಮಾರನಾಯ್ಕ, ತಾಪಂ ಸದಸ್ಯ ಶಶಿ, ಈಶ್ವರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement