ಕರ್ತವ್ಯಲೋಪ: ಪೇದೆಗಳಿಬ್ಬರ ಅಮಾನತು
ಚಿಕ್ಕಮಗಳೂರು: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತರೀಕೆರೆ ತಾಲೂಕಿನ ಅಜ್ಜಂಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಹಾಗೂ ಪೇದೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಶುಕ್ರವಾರ ಅಮಾ ನತುಗೊಳಿಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯ ಮುಖ್ಯ
ಪೇದೆ ಗುರು
ಮೂರ್ತಿ
ಹಾಗೂ
ಪೇದೆ ಮಹೇ
ಶ್ವರ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಆರೋಪಿ ಮೈಲಾರಿ ಎಂಬುವವರನ್ನು ಬೆಂಗಳೂರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಗುರುಮೂರ್ತಿ ಹಾಗೂ ಮಹೇಶ್ವರ ಅವರು ಶುಕ್ರವಾರ ಬೆಳಿಗ್ಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಆರೋಪಿ ಮೈಲಾರಿ ಅರಸಿಕೆರೆಯಲ್ಲಿ ತಪ್ಪಿಸಿಕೊಂಡು ಹೋಗಿದ್ದಾನೆ. ಈ ಸಂಬಂಧ ಕರ್ತವ್ಯ ಲೋಪದ ಮೇಲೆ ಇವರಿಬ್ಬರನ್ನೂ ಅಮಾನತುಗೊಳಿಸಲಾಗಿದೆ.