ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವವಿರಲಿ'

Rashmi Kasaragodu
Updated On : 4 Jan 2014, 11:45 am

ಕ.ಪ್ರ.ವಾರ್ತೆ, ಬೀರೂರು, ಜ.3
ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕೇ ಹೊರತು ಯಾವುದೇ ದುರುದ್ದೇಶ ಇರಬಾರದು ಎಂದು ಜೆಡಿಎಸ್ ಮುಖಂಡ, ದಾನಿ ಎಚ್.ಉಮೇಶ್ ಹೇಳಿದರು. ಪಟ್ಟಣದ ರೇಲ್ವೆ ಕ್ವಾರ್ಟಸ್ನಲ್ಲಿ ವಿಜಯಶ್ರೀ ಕ್ರಿಕೆಟರ್ಸ್ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮಲ್ಲಿಯೂ ಸಹ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುವ ಸಾಮರ್ಥ್ಯವಿರುವ ಕ್ರೀಡಾಪಟುಗಳಿದ್ದಾರೆ.
ಅವರ ಪ್ರತಿಭೆಗಳು ಹೊರಬರುವಂತಾಗಬೇಕು. ಈ ನಿಟ್ಟಿನಲ್ಲಿ ಶಾಸಕ ದತ್ತ ಅವರ ಮಾರ್ಗದರ್ಶನದಲ್ಲಿ ಉತ್ತೇಜನ ನೀಡುವುದಾಗಿ ಭರವಸೆ ನೀಡಿದರು.ಜೆಡಿಎಸ್ ಮುಖಂಡರಾದ ಗಂಗಾಧರನಾಯ್ಕ, ಯಗಟಿ ತಮ್ಮಯ್ಯ, ತಿಮ್ಮೇಗೌಡ, ಕೃಷ್ಣಮೂರ್ತಿ, ಶಿವು, ಶಂಕರ್, ಲಮಾಣಿ, ಸತ್ಯರಾಜ್, ಮಹಾತಾಯನ್, ಲೋಹಿತ್, ರಿಯಾಜ್, ರಘು, ದರ್ಶನ್, ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement