ನಾಳೆಯಿಂದ ಯೋಗ ಶಿಬಿರ
ಚಿಕ್ಕಮಗಳೂರು: ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಹಯೋಗದೊಂದಿಗೆ ಜ. 5ರಿಂದ 12ರವರೆಗೆ ಬೆಳಗ್ಗೆ 6 ರಿಂದ 7 ಗಂಟೆವರೆಗೆ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಗುರು ಬೆಂಗಳೂರಿನ ಅನಂತ್ ಹೇಳಿದ್ದಾರೆ.
ನಗರದ ಗಾಯತ್ರಿ ದೇವಿ ಕಲ್ಯಾಣಮಂಟಪದಲ್ಲಿ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಪತಂಜಲಿ ಯೋಗ ಸಮಿತಿಯ ಮುಖ್ಯ ಸಂರಕ್ಷಕ ದಿವ್ಯ ಜ್ಞಾನಾನಂದ ಸ್ವಾಮೀಜಿ, ಸ್ವಾಭಿಮಾನ್ ಟ್ರಸ್ಟ್ನ ರಾಜ್ಯ ಪ್ರಭಾರಿ ಜಿ. ಪ್ರದೀಪ್, ಪತಂಜಲಿ ಯೋಗ ಸಮಿತಿ ನಾರಾಯಣ, ಶಾಸಕ ಸಿ.ಟಿ. ರವಿ, ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಪ್ರಾಣಾಯಾಮದಿಂದ ಕ್ಯಾನ್ಸರ್, ಬೊಜ್ಜುತನ, ಕಡಿಮೆ ಮತ್ತು ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಂಡಿ ಮತ್ತು ಸೊಂಟ ನೋವು, ಅಸ್ತಮಾ, ಮನಸ್ಸಿನ ತೊಂದರೆಗಳಂತಹ ಎಲ್ಲಾ ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆ ದೂರ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ಭಾಗವಹಿಸುವವರು ಮಾಹಿತಿಗೆ ಮೊ. 9964835283 ಸಂಪರ್ಕಿಸಲು ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್ನ ಜನಕರಾಜ್ ಅರಸ್, ಜಿಲ್ಲಾ ಸಂಚಾಲಕ ಪ್ರೀತೇಶ್ ಇದ್ದರು.