ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಕಾಲಕ್ಕೆ ಕಡತ ವಿಲೇವಾರಿ ಕಡ್ಡಾಯ

Rashmi Kasaragodu
Updated On : 4 Jan 2014, 11:41 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಜ.3
ನಿಗದಿತ ಸಮಯದೊಳಗೆ ಕಡತಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಸೂಚನೆ ನೀಡಿದ್ದಾರೆ.
ಇಲ್ಲಿನ ತಾಲೂಕು ಕಚೇರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಇಲ್ಲಿನ ಮುಜರಾಯಿ ಶಾಖೆ, ಚುನಾವಣೆ ಶಾಖೆ, ಅಟಲ್ ಜಿ ಜನಸ್ನೇಹಿ ಕೇಂದ್ರ, ಹಕ್ಕು ದಾಖಲೆ ಶಾಖೆ, ಸಾಮಾಜಿಕ ಭದ್ರತಾ ಯೋಜನಾ ಶಾಖೆ, ಅಕ್ರಮ ಸಕ್ರಮ ಶಾಖೆ, ಭೂಮಿ ಕೇಂದ್ರ, ನ್ಯಾಯಾಂಗ ವಿಭಾಗ, ಸಕಾಲ ಅರ್ಜಿ ಕೇಂದ್ರ, ಆಹಾರ ವಿಭಾಗ ಸೇರಿದಂತೆ ವಿವಿಧ ಮತ್ತಿತರೆ ವಿಭಾಗಗಳನ್ನು ಪರಿಶೀಲಿಸಿದರು.
ಶೀಘ್ರ ವಿಲೇವಾರಿ ಮಾಡಿ: ಭೂಮಿ ಕೇಂದ್ರದಲ್ಲಿ ಭೂ ನೋಂದಣಿಯ ದಾಖಲೆಗಳ ಹಕ್ಕು ಬದಲಾವಣೆಗಳನ್ನು ಮಾಡುವಾಗ ಅನುಸರಿಸುವ ಕ್ರಮ ಮತ್ತು ಅವುಗಳನ್ನು ಕಾನೂನು ರೀತಿಯಲ್ಲಿ ಎಷ್ಟು ದಿನದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ನಿಯಮಾನುಸಾರ ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಸಾಮಾಜಿಕ ಭದ್ರತೆ ಶಾಖೆಯಲ್ಲಿ ನಿರ್ಗತಿಕ ವಿಧವಾ ವೇತನ, ಮನಸ್ವಿನಿ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಗಳ ಅರ್ಜಿ ಸ್ವೀಕೃತಗೊಂಡ ದಿನಗಳಿಂದ ಎಷ್ಟು ದಿನಗಳ ಒಳಗೆ ವಿಲೇವಾರಿಯಾಗಿರುವ ಬಗ್ಗೆ ಪರಿಶೀಲಿಸಿ, ಆದಷ್ಟು ಬೇಗ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಆದ್ಯತೆ ಮೇರೆಗೆ ನೆರವು ನೀಡಬೇಕು ಎಂದು ಸೂಚಿಸಿದರು.
ದಾಖಲೆ ನೀಡಲು ಸೂಚನೆ: ಪಹಣಿ ಹಾಗೂ ಮ್ಯೂಟೇಷನ್ಗಳ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ವಿತರಣೆ ವ್ಯವಸ್ಥೆ ಪರಿಶೀಲನೆ ನಡೆಸಿ, ರೈತರಿಗೆ ತೊಂದರೆಯಾಗದಂತೆ ವಿಳಂಬಕ್ಕೆ ಅವಕಾಶ ನೀಡದೇ ದಾಖಲೆಗಳನ್ನು ನೀಡಬೇಕೆಂದು ಸಿಬ್ಬಂದಿಗಳಿಗೆ ತಿಳಿಸಿದರು.
ಜನನ ಮರಣ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಜೀವಂತ, ಕುಟುಂಬ ಸದಸ್ಯರ ಪ್ರಮಾಣದ ಭೂರಹಿತ ಪ್ರಮಾಣ ಪತ್ರ, ಕೃಷಿಕ ಕಾರ್ಮಿಕ ಪ್ರಮಾಣ ಪತ್ರ ವಿತರಣೆಯ ಬಗ್ಗೆ ಕಾಲಮಿತಿಯನ್ನು ಅನುಸರಿಸುತ್ತಿರುವ ಬಗ್ಗೆ ವಿವರವಾಗಿ ಪರಿಶೀಲಿಸಿದರು.
ಭೂ ದಾಖಲೆ ಕೋಣೆಗೆ ಭೇಟಿ ನೀಡಿ ಸ್ವೀಕರಿಸಿ ದಾಖಲಾದ ಕಡತಗಳನ್ನು ಕ್ರಮವಾಗಿ ಹೋಬಳಿ ಗ್ರಾಮ ಹಾಗೂ ವರ್ಷವಾರು ಪ್ರತ್ಯೇಕಿಸಿ ವ್ಯವಸ್ಥಿತವಾಗಿ ಜೋಡಿಸಿ ನಿರ್ವಹಿಸುವಂತೆ ಸಲಹೆ ನೀಡಿದರು ಹಾಗೂ ದಾಖಲೆಗಳನ್ನು ಕೋರಿ ಬಂದ ಸಾರ್ವಜನಿಕರನ್ನು ಸಂಪರ್ಕಿಸಿ ಅವರ ಅಹವಾಲು ಆಲಿಸಿ ಅವರ ದಾಖಲೆ ನೀಡಲು ಸೂಚಿಸಿದರು.
ಆಹಾರ ಶಾಖೆಯಲ್ಲಿ ಪಡಿತರ ಚೀಟಿಗಳನ್ನು ಕೋರಿ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಕಾರ್ಯ ಮತ್ತು ನವೀಕರಣ ಹಾಗೂ ರದ್ದುಪಡಿಸುವ ಅರ್ಜಿಗಳ ವಿಲೇವಾರಿ ಬಗ್ಗೆ ಅರ್ಜಿದಾರನಿಗೆ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿರುವವರ ಬಗ್ಗೆ ಮಾಹಿತಿ ಪಡೆದರು. ಅವರು ಪಡಿತರ ವಿತರಣೆ ಸಮರ್ಪಕವಾಗಿ ಆಗುತ್ತಿರುವ ಬಗ್ಗೆಯು ಮಾಹಿತಿ ಪಡೆದರು.
ಅನುಪಯುಕ್ತ ಪೀಠೋಪಕರಣಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು, ಕಚೇರಿ ಆವರಣಗಳ ಸ್ವಚ್ಛತೆ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ತಹಸೀಲ್ದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವೇಗೌಡ, ಕಂದಾಯ ಇಲಾಖೆಯ ಹೇಮಂತ್ಕುಮಾರ್ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement