ಸೌಕರ್ಯಕ್ಕೆ ಒತ್ತಾಯ
ಬೀರೂರು: ಪಟ್ಟಣದ ಮೂಲಭೂತ ಸುಧಾರಣೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕನ್ನಡ ಸೇನೆಯ ಕಾರ್ಯಕರ್ತರು ಬೀರೂರು ಪುರಸಭಾ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭ ಕನ್ನಡ ಸೇನೆ ಮುಖಂಡರು ಮಾತನಾಡಿ, ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 7 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಎಸ್.ಆರ್. ಲಕ್ಷ್ಮಯ್ಯ ಬಡಾವಣೆ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಪಿಕೆಎಸ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ನೇಮಕ ಮಾಡಬೇಕು. ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಮತ್ತು ಸಿಬ್ಬಂದಿ ನೇಮಕ, ಗ್ರಾಮಾಂತರ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಹೆಬ್ಬೆ ಹಾಗೂ ಭದ್ರಾ ಕುಡಿಯುವ ನೀರು ಶೀಘ್ರ ಪೂರೈಕೆ ಅಡಕೆ ಬೆಳೆಗಾರರ ಹಿತ ಸಂರಕ್ಷಣೆ ಬೀರೂರು ಲಿಂಗದಹಳ್ಳಿ ಮತ್ತು ಅಜ್ಜಂಪುರ ರಸ್ತೆ ರಿಪೇರಿ ಭಗವತ್ ನಗರ ರಸ್ತೆ ಸಂಪರ್ಕಕ್ಕೆ ಆದ್ಯತೆ. ಪುರಸಭಾ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿಗೆ ಕ್ರಮ ಕೈಗೊಳ್ಳುವುದು ಸೇರಿಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಾಧಿಕಾರಿಗಳಿಗೆ ನೀಡಲಾಯಿತು.
ಇದೇ ಸಂದರ್ಭ ಕನ್ನಡ ಸೇನೆ ಜಿಲಾಧ್ಯಕ್ಷ ರಾಜೇಗೌಡ, ಕಡೂರು ತಾಲೂಕು ಘಟಕದ ಅಧ್ಯಕ್ಷ ಮೋಹನ್ಕುಮಾರ್, ಬೀರೂರು ಘಟಕದ ಅಧ್ಯಕ್ಷ ಮುಬಾರಕ್, ಮಂಜುನಾಥ್ ಸಾಮಾಜಿಕ ಸೇವಾ ಹೋರಾಟಗಾರರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಮತ್ತಿತರರು ಮಾತನಾಡಿದರು.
ಹೇಮಂತಕುಮಾರ್ ಕನ್ನಡ ಸೇನೆ ಕಾರ್ಯಕರ್ತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.