2 ವರ್ಷ ಕಳೆದರೂ ಮುಗಿಯದ ಸಾಮರ್ಥ್ಯ ಸೌಧ ಕಟ್ಟಡ ಕಾಮಗಾರಿ
ಕೊಳ್ಳೇಗಾಲ: ತಾಲೂಕು ಪಂಚಾಯ್ತಿ ಆವರಣದಲ್ಲಿ ನಡೆಯುತ್ತಿರುವ ಸಾಮರ್ಥ್ಯ ಸೌಧ ಕಟ್ಟಡ ಕಾಮಗಾರಿಯನ್ನು ತಾಪಂ ಉಪಾಧ್ಯಕ್ಷ ನಂಜೇಗೌಡ ಮತ್ತು ತಾಪಂ ಸದಸ್ಯರು ಪರಿಶೀಲಿಸಿದರು. ಕಾಮಗಾರಿ ಪ್ರಾರಂಭವಾಗಿ 2 ವರ್ಷ ಕಳೆದಿದ್ದು ಇನ್ನೂ ಮಂದಗತಿಯತ್ತ ಸಾಗುತ್ತಿರುವ ಕಾಮಗಾರಿಯನ್ನು ತಕ್ಷಣ ಮುಗಿಸಿ ಲೋಕಾರ್ಪಣೆ ಮಾಡಲು ಭೂಸೇನಾ ಇಲಾಖಾಧಿಕಾರಿಗಳು ಮುಂದಾಗಬೇಕು. ಅಗತ್ಯ ಅನುದಾನ ಕೊಡಿಸಲು ಸರ್ಕಾರದ ಗಮನ ಸೆಳೆಯುವುದಾಗಿ ತಾಪಂ ಉಪಾಧ್ಯಕ್ಷ ಭರವಸೆ ನೀಡಿದರು. ಕಾಮಗಾರಿ ಈಗಾಗಲೇ ಶೇ.60ರಷ್ಟು ಪೂರ್ಣಗೊಂಡಿದ್ದು ಜರೂರು ಪೂರ್ಣಗೊಳಿಸಬೇಕು.
45 ಲಕ್ಷ ರು. ಅಂದಾಜಿನ ಕಾಮಗಾರಿ ಇದಾಗಿದ್ದು ಫೆಬ್ರವರಿ ತಿಂಗಳೊಳಗೆ ಮುಗಿಸಿ ಎಂದು ತಾಕೀತು ಮಾಡಿದರು. ಭೂಸೇನಾ ನಿಗಮಾಧಿಕಾರಿ ವೇಣುಗೋಪಾಲ್, ತಾಪಂ ಸದಸ್ಯ ಸಿದ್ದಪ್ಪಾಜಿ, ಶಿವಬಸಪ್ಪ, ಮಲ್ಲಯ್ಯ, ಅಜ್ಜಿಪುರ ಮುರಳಿ, ಗಣೇಶ, ಹನುಮಯ್ಯ ಮತ್ತಿತರರು ಇದ್ದರು.