ಆರೋಪಿ ಬಂಧನಕ್ಕೆ ಆಗ್ರಹ
ಮೂಡಿಗೆರೆ: ಬಿಳುಗುಳದ ಏಳುಮುಖ ಚೌಡೇಶ್ವರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಗುರುವಾರ ರಾತ್ರಿ ಮೂವರು ದುಷ್ಕರ್ಮಿಗಳು ಒಡೆದು ಹಾಕಿದ್ದು, ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುನೀಲ್ ನಿಡಗೂಡು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಡಿಪಿಐ ಕ್ಷೇತ್ರಾಧ್ಯಕ್ಷ ರಫೀಕ್ ಹಾಗೂ ಪಿಎಫ್‌ಐ ವಲಯಾಧ್ಯಕ್ಷ ಸಿಕಂದರ್ ಅವರು ಆರೋಪಿಗಳ ರಕ್ಷಣೆಗೆ ಪ್ರಯತ್ನಪಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ಮಾತನಾಡಿ, ಪೊಲೀಸರ ಮೇಲೆ ವಿನಾಕಾರಣ ಆರೋಪ ಹೊರಿಸುವುದರಿಂದ ಆರೋಪಿಗಳ ಬಂಧನಕ್ಕೆ ತೊಂದರೆ ಆಗುತ್ತದೆ ಎಂದರು.
ಪಂಚಾಕ್ಷರಿ, ಬಿಜೆಪಿ ನಗರಾಧ್ಯಕ್ಷ ಪ್ರವೀಣ್ ಪೂಜಾರಿ, ಬೆಟ್ಟಗೆರ ಗ್ರಾಪಂ ಅಧ್ಯಕ್ಷ ವಸಂತ್, ವೀರೇಂದ್ರ, ರಾಹುಲ್ ಮತ್ತು ಆತ್ಮೀಯ ಪಟೇಲ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.