ಗೋಡೆ ಧ್ವಂಸ: ಖಂಡನೆ
ಮೂಡಿಗೆರೆ: ಬಿಳುಗುಳದ ಶ್ರೀ ಏಳುಮುಖ ಚೌಡೇಶ್ವರಿ ದೇವಸ್ಥಾನದ ಮುಖಮಂಟಪವನ್ನು ಹಾಳುಗೆಡವಿರುವುದನ್ನು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳವು ಉಗ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳ ತಾಲೂಕು ಸಂಚಾಲಕ ಸಂದರ್ಶ ತಿಳಿಸಿದರು.
ಅವರು ಪತ್ರಿಕಾ ಭವನದಲ್ಲಿ ಮಾತನಾಡಿ, ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ದರ್ಗಾದ ಮುಂದೆ ಯಾರೋ ಕಿಡಿಗೇಡಿಗಳು ಅಪವಿತ್ರಗೊಳಿಸಿದ್ದಕ್ಕಾಗಿ ಕೆಲ ಮುಸ್ಲಿಂ ಪುಂಡರುಗಳು ಕಾನೂನನ್ನು ಕೈಗೆತ್ತಿಕೊಂಡು ನಗರದಾದ್ಯಂತ ದಾಂಧಲೆ ನಡೆಸಿದ್ದರು. ಆದರೆ, ಮೂಡಿಗೆರಯಲ್ಲಿ ಮುಸ್ಲಿಂ ಯುವಕರೇ ಕೃತ್ಯ ಎಸಗಿರುವುದು ತಿಳಿದೂ ಕೂಡ ಹಿಂದೂ ಸಂಘಟನೆಗಳು ಸೌಮ್ಯ ರೀತಿಯಲ್ಲಿ ಪ್ರತಿಭಟನೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿವೆ ಎಂದರು.