ಮನರಂಜಿಸಿದ ಶ್ರೀಕೃಷ್ಣ ತುಲಾಭಾರ ಗೊಂಬೆಯಾಟ
ತರೀಕೆರೆ: ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ 121ನೇ ರಥೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಎಚ್.ಆರ್. ಶ್ರೀನಾಥ್, ನಿರ್ದೇಶಕರು ಸಿಲ್ವರ್ ಜಂ ಗ್ರೂಪ್ ಕಂಪನಿ, ವಸಂತ್ ಅಂಡ್ ಕೋ ಚಾರ್ಟೆಡ್ ಅಂಕೌಟೆನ್ಸ್, ವಿಜಯ್ ಶ್ರೀರಾಮ್ ಅಂಡ್ ಕಂಪನಿ ಚಾರ್ಟೆಡ್ ಅಕೌಂಟೆನ್ಸ್ ಅವರು ಪ್ರಾಯೋಜಿಸಿದ, ರಾಷ್ಟ್ರ ಮತ್ತು ರಾಜ್ಯ ಪುರಸ್ಕೃತ ಅಂತಾರಾಷ್ಟ್ರೀಯ ಖ್ಯಾತಿಯ, ಬೆಂಗಳೂರು ಪುತ್ಥಳಿ ಕಲಾರಂಗದ ಕಲಾವಿದರು 2 ಗಂಟೆಗಳ ಕಾಲ ಪ್ರದರ್ಶಿಸಿದ ಶ್ರೀಕೃಷ್ಣ ತುಲಾಭಾರ ಸೂತ್ರದ ಗೊಂಬೆಯಾಟ ಪ್ರದರ್ಶನ ಎಲ್ಲರ ಮಚ್ಚುಗೆ ಗಳಿಸಿತು.
ಪುತ್ಥಳಿ ಕಲಾರಂಗದ ಹಿರಿಯ ಕಲಾವಿದ ದತ್ತಾತ್ರಿ ಅರಳಿಕಟ್ಟೆ ಮಾತನಾಡಿ, ಭಾರತೀಯ ವೇದಾಂತ ವಿಜ್ಞಾನಗಳನ್ನು ಜನರಿಗೆ ಪರಿಚಯಿಸಬೇಕು ಎನ್ನುವುದೇ ಸೂತ್ರದ ಗೊಂಬೆಯಾಟ ಪ್ರದರ್ಶನದ ಮೂಲ ಉದ್ದೇಶವಾಗಿದೆ. ಸೂತ್ರದ ಬೊಂಬೆಯಾಟದಿಂದ ಜನರಂಜನೆ, ಮನರಂಜನೆ ಜೊತೆಗೆ ಆತ್ಮರಂಜನೆಯೂ ದೊರೆಯುತ್ತದೆ ಎಂದು ತಿಳಿಸಿದರು.