ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ಕಾಮಗಾರಿ ಮುಂದುವರೆಸಿ...

Lingaraj Badiger
Updated On : 6 Jan 2014, 10:43 am

ಚಿಕ್ಕಮಗಳೂರು ನಗರದಲ್ಲಿ ಒಂದಲ್ಲಾ ಒಂದು ರಸ್ತೆ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದ್ದವು. ಆದರೆ, ಕಳೆದ ಏಳೆಂಟು ತಿಂಗಳಿಂದ ಯಾವುದೇ ರಸ್ತೆಯ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ.
 ಇಲ್ಲಿನ ಮಾರ್ಕೇಟ್ ರಸ್ತೆಗೆ ಕಾಂಕ್ರೀಟ್ ಹಾಕಲು ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆಯೂ ಸಹ ಪೂರ್ಣಗೊಂಡಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ಜನರು ತಮ್ಮ ವಾಣಿಜ್ಯ ಮಳಿಗೆ ಹಾಗೂ ಮನೆಗಳ ಜಾಗವನ್ನು ಬಿಟ್ಟುಕೊಟ್ಟು ಸುಮಾರು ಒಂದು ವರ್ಷ ಕಳೆದಿದೆ.
 ಆದರೆ, ಈವರೆಗೆ ರಸ್ತೆ ನಿರ್ಮಾಣದ ಕಾಮಗಾರಿ ಆರಂಭಗೊಂಡಿಲ್ಲ. ಕಟ್ಟಡಗಳ ತೆರವು ಕಾರ್ಯದಿಂದಾಗಿ ಕಟ್ಟಡ ಮಣ್ಣುಗಳಿಂದ ಚರಂಡಿಗಳು ತುಂಬಿ ಹೋಗಿವೆ. ಈ ರಸ್ತೆಯಲ್ಲಿ ಓಡಾಡುವ ಜನರು ಧೂಳಿನಲ್ಲಿಯೇ ಮುಂದೆ ಸಾಗುತ್ತಿದ್ದಾರೆ. ಇನ್ನು ಚರಂಡಿಗಳಲ್ಲಿ ಮಣ್ಣು ತುಂಬಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಜಾಗ ಇಲ್ಲದೆ. ಎಲ್ಲೆಂದರಲ್ಲಿ ನೀರು ನಿಂತಿದೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ.
ನಗರಸಭೆಯ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು, ಮಾರ್ಕೇಟ್ ರಸ್ತೆಯನ್ನು ಒಮ್ಮೆ ವೀಕ್ಷಿಸಬೇಕು. ಅಲ್ಲಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಇದರ ಜತೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು.
             -  ಪ್ರಮೋದ್
ಚಿಕ್ಕಮಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement