ನಗರೋತ್ಥಾನದ ಹಣ ರಸ್ತೆ ದುರಸ್ತಿಗೆ
ಮೂಡಿಗೆರೆ: ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಲೋಕೋಪಯೋಗಿ ಇಲಾಖೆ ರಸ್ತೆಗೆ ಬಳಸುತ್ತಿದ್ದು. ಪಟ್ಟಣ ಅಭಿವೃದ್ಧಿ ವಂಚಿತವಾಗಿದೆ ಎಂದು ಪಪಂ ಸದಸ್ಯರು ಆರೋಪಿಸಿದ್ದಾರೆ.
ಪಟ್ಟಣ ಪಂಚಾಯಿತ್‌ನಲ್ಲಿ ಸದಸ್ಯರು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಕೆ. ವೆಂಕಟೇಶ್ ಮಾತನಾಡಿ ರು. ಕೋಟಿ ಸರ್ಕಾರದಿಂದ ಮಂಜೂರಾಗಿದೆ ಎಂದರು.
ಚಾಲನೆ ನೀಡುವ ಹುನ್ನಾರ: ಅದರಲ್ಲಿ ರು. 3.5 ಕೋಟಿಯನ್ನು ಲೋಕೋಪಯೋಗಿ ಇಲಾಖೆಗೆ ಸೇರಿದ ಕೆ.ಎಂ. ರಸ್ತೆಯಾಗಿರುವ ಗಂಗನಮಕ್ಕಿ ಗಣಪತಿ ದೇವಾಲಯದಿಂದ ಮಹಾತ್ಮಾಗಾಂಧಿ ಆಸ್ಪತ್ರೆವರಗೆ ದುರಸ್ತಿ ಕಾರ್ಯಕ್ಕಾಗಿ ಬಳಸಿಕೊಳ್ಳಲು ಟೆಂಡರ್ ಪೂರ್ಣಗೊಳಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ನಗರೋತ್ಥಾನ ಹಣವನ್ನು ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡುವುದರಿಂದ ಯೋಜನೆ ದುರ್ಬಳಕೆಯಾದಂತಾಗುತ್ತದೆ ಅದ್ದರಿಂದ ತಕ್ಷಣವೇ ಕೆ.ಎಂ. ರಸ್ತೆಗೆ ಬಳಸಲು ಉದ್ದೇಶಿಸಿರುವ ಯೋಜನೆ ಯನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.
ಹಣ ಬಿಡುಗಡೆಯಾಗಿಲ್ಲ: ನಗರೋತ್ಥಾನ ಯೋಜನೆ ಹಣವನ್ನು ಕಡೂರು- ಮಂಗಳೂರು ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಹರಡಿದ್ದು, ರಸ್ತೆ ಅಗಲೀಕರಣಕ್ಕೆ ಯಾವುದೇ ನಿಗದಿತ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಮತ್ತೊಬ್ಬ ಸದಸ್ಯ ರಾಮಕೃಷ್ಣ ಮಾತನಾಡಿ, ಕಡೂರು- ಮಂಗಳೂರು ರಸ್ತೆಯನ್ನು ಕಳೆದ ವರ್ಷ ಪಟ್ಟಣ ಪಂಚಾಯಿತ್‌ನಿಂದಲೇ ಸುಮಾರು ರು. 1.07 ಕೋಟಿ ವಿನಿಯೋಗಿಸಿ, ಗಣಪತಿ ದೇವಾಲಯ ದಿಂದ ಮಟನ್ ಮಾರ್ಕೆಟ್‌ವರೆಗೆ ಕಾಂಕ್ರಿಟೀಕರಣಗೊಳಿಸಲಾಗಿದ್ದು, ಮತ್ತೆ ಇದೇ ರಸ್ತೆಗೆ ಹಣ ಹಾಕುತ್ತಿರುವುದು ಪಟ್ಟಣವನ್ನು ಅಭಿವೃದ್ಧಿಯಿಂದ ವಂಚಿತವನ್ನಾಗುವ ಹುನ್ನಾರ ನಡೆದಿದೆ ಎಂದರು.
ಪಟ್ಟಣದಲ್ಲಿ ರಸ್ತೆ, ಒಳ ಚರಂಡಿ, ನೀರಿನ ಸೌಲಭ್ಯ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿದ್ದು, ನಗರೋತ್ಥಾನ ಯೋಜನೆಯ ಹಣವನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸದಸ್ಯರಾದ ಲತಾ ಲಕ್ಷ್ಮಣ್, ಪೂರ್ಣಿಮಾ ಮಲ್ಯ, ಪಾರ್ವತಮ್ಮ, ಸುಲೋಚನಾ, ಮದೀಶ್ ಮೊದಲಾದವರು ಉಪಸ್ಥಿತರಿದ್ದರು.