ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಮೂಡಿಗೆರೆ, ಜ.7
ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತೋಟದೂರು ಗ್ರಾಪಂ ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಪಿ. ರಾಜರತ್ನಮ್ ಕಳಸ ಹೋಬಳಿಯ ತ ನೂಡಿ ಗ್ರಾಮದ ಕಗ್ಗನಳ್ಳದ ದಲಿತರ ಕಾಲೋನಿಗಳ್ಳಲ್ಲಿ ಕುಡಿಯುವ ನೀರು, ಮನೆ, ವಿದ್ಯುತ್ ಬಲ್ಬ್, ರಸ್ತೆ, ಬೀದಿ ದೀಪಗಳಿಂದ ವಂಚಿತವಾಗಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಬದುಕುವಂತಾಗಿದೆ ಎಂದು ಆರೋಪಿಸಿದರು.
ದಲಿತರ ಹೆಸರಲ್ಲಿ ಕೊಳ್ಳೆ: ಕೂಲಿ ಇಲ್ಲದವನಿಗೆ ಉದ್ಯಾಗ ಖಾತ್ರಿ ಎಂಬ ಯೋಜನೆಗಳಿವೆ. ಆದರೆ ಅಂತಹ ಯೋಜನೆಗಳು ಗ್ರಾಪಂ ಸದಸ್ಯರ, ಅಧಿಕಾರಿಗಳ ಕಪಿಮುಷ್ಟಿಯಲ್ಲಿದೆ. ಜನಪ್ರತಿನಿಧಿಗಳು ದಲಿತರ ಹೆಸರಿನಲ್ಲಿ ಕೊಳ್ಳೆಹೊಡೆಯುತ್ತಿದ್ದಾರೆ ಎಂದು ಹೇಳಿದರು.
ಬಿಎಸ್‌ಪಿ ಕಳಸ ಹೋಬಳಿ ಅಧ್ಯಕ್ಷ ಚಲ್ಲು ಮಾತನಾಡಿ, ಹೋಬಳಿಯ 6 ಪಂಚಾಯಿತಿಯಲ್ಲಿ ತೋಟದೂರು ಪಂಚಾಯಿತ್ ಆಡಳಿತ ವೈಖರಿ ಅತ್ಯಂತ ಹಿನಾಯವಾಗಿದೆ. ಇಲ್ಲಿಗೆ ಬರುವ ಯಾವುದೇ ಸೌಲಭ್ಯಗಲು ಬಡವರ ಮನೆಗೆ ದಕ್ಕುವುದಿಲ್ಲ ಎಂದು ಹೇಳಿದರು.
ಪ್ರತಿಭಟನಕಾರರು ಬಾಳೆಹೊಳೆಯ ಚನ್ನಕೇಶವ ದೇವಸ್ಥಾನದ ಬಳಿಯಿಂದ ಮುಖ್ಯರಸ್ತೆಯ ಮೂಲಕ ಮೆರವಮಿಗೆ ನಡೆಸಿ, ತೋಟದೂರು ಗ್ರಾಪಂಗೆ ಮುತ್ತಿಗೆ ಹಾಕಿ, ಪಿಡಿಒ ಮುಖಾಂತರ ಜಿಲ್ಲಾಧಿಕಾರಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಹ ಸಂಚಾಲಕ ಬಸವರಾಜು, ತಾಲೂಕು ಸಂಚಾಲಕ ಕೆ.ಎನ್. ರಮೆಶ್, ತಾಲೂಕು ಮಹಿಳಾ ಸಂಚಾಲಕಿ ಜಯಂತಿ, ಸುಂದರ, ಕೆನ್ನಿಗ ಹಾಗೂ ದಲಿತ ಸಂಘರ್ಷ ಸಮಿತಿ ಹಾಗೂ ಬಿಎಸ್‌ಪಿ ಕಾರ್ಯಕರ್ತರು ಇದ್ದರು.