ಗುರು ಪಂರಂಪರೆ ಅಥೈಸಿಕೊಳ್ಳಿ
ತರೀಕೆರೆ: ಹರಿದಾಸರು ಸಂಗೀತ ಉಳಿಸಿ ಬೆಳೆಸಿದರು ಎಂದು ಖ್ಯಾತ ಉಪನ್ಯಾಸಕ ಕೆ.ಎನ್. ವೆಂಕಟನಾರಾಯಣ ತಿಳಿಸಿದರು.
ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ 121ನೇ ರಥೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆ.ವಿ. ಕೃಷ್ಣಪ್ರಸಾದ್ ಅವರು ಪ್ರಸ್ತುತಪಡಿಸಿದ ಗಾನ ಜ್ಞಾನಸುಧಾ ಸಂಗೀತ ರೂಪಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುವಿನ ಪರಂಪರೆ ಅರ್ಥ ಮಾಡಿಕೊಳ್ಳಬೇಕು. ಎಂದು ತಿಳಿಸಿದರು.
ಗಾಯಕ ಕೃಷ್ಣಪ್ರಸಾದ್ ತ್ಯಾಗರಾಜರು, ಪುರಂದರದಾಸರ ಕೃತಿಗಳನ್ನು ಹಾಡಿದರು. ಕಲಾವಿದರಾದ ಮಧು ಮುರಳಿ, ಅಶೋಕ್ ಅವರ ಪಕ್ಕವಾದ್ಯ ನುಡಿಸಿದರು. ಸಮಿತಿ ವತಿಯಿಂದ ಗಾಯಕ ಕೃಷ್ಣಪ್ರಸಾದ್, ಉಪನ್ಯಾಸಕ ವೆಂಕಟನಾರಾಯಣ ಅವರನ್ನು ಗೌರವಿಸಲಾಯಿತು.