ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬದುಕಲ್ಲಿ ವಿವೇಕ, ಸ್ವಾಭಿಮಾನ ಅಗತ್ಯ: ನಾಗರಾಜ ರಾವ್

Lingaraj Badiger
Updated On : 9 Jan 2014, 10:55 am

ಚಿಕ್ಕಮಗಳೂರು: ಧಾರ್ಮಿಕತೆ ಪ್ರಚಾರದ್ದಲ್ಲ, ಆಚಾರದ್ದು. ಅಂತರಂಗದ ಪ್ರಪಂಚದಲ್ಲಿ ಅರಳಿಸುವುದೇ ಆಚಾರ ಎಂದು ಉಪನ್ಯಾಸಕ ಕಲ್ಕಟ್ಟೆ ಪುಸ್ತಕಮನೆಯ ಎಚ್.ಎಂ. ನಾಗರಾಜರಾವ್ ಹೇಳಿದ್ದಾರೆ.
ಚೌಳಹಿರಿಯೂರಿನ ಸೋಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಎಚ್.ಸಿ. ಹಿರಣ್ಯಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಬೀಗುವುದರ ಬದಲು ಬಾಗುವುದರಿಂದ ಬೆಳಗನ್ನು ಕಾಣಲು ಸಾಧ್ಯ. ವಿವೇಕ ಮತ್ತು ಸ್ವಾಭಿಮಾನದ ಬದುಕು ನಮ್ಮದಾಗಬೇಕು ಎಂದರು.
ಮನಿಪ್ಲಾಂಟ್: ಅಹಂಕಾರ- ಮಾಹಿತಿಗಳ ಕಸ ನಮ್ಮನ್ನು ಆವರಿಸಿದ್ದು, ಇದನ್ನು ಜ್ಞಾನಕ್ಕೆ ಪರಿವರ್ತನೆ ಮಾಡಿಕೊಳ್ಳಬೇಕು. ಬೇರು- ಹೂವು ಇಲ್ಲದ ಮನಿಪ್ಲಾಂಟ್‌ಗಳಾಗದೆ, ಆಳವಾಗಿ ಬೇರು ಬಿಟ್ಟು ಚೆಂದದ ಹೂ ಫಲ ಕೊಡುವ ಗಿಡ ನಾವಾಗಬೇಕೆಂಬುದಕ್ಕೆ ಹಿರಣ್ಯಪ್ಪ ಅವರ ಬದುಕು ಮಾದರಿ ಎಂದರು.
ಶುಚಿಗೆ ಸಹಾಯಕ: ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಪರಿವರ್ತನೆ ಮಾಡಬೇಕಾದ ವ್ಯಕ್ತಿಗಳು ಹೃದಯದಲ್ಲಿ ಪ್ರೀತಿ ತುಂಬಿಕೊಂಡು ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿದರೆ ಒಳ್ಳೆಯ ಸಮಾಜ ಕಟ್ಟಬಹುದು ಎಂದರು.
ದೆಹಲಿ ಚುನಾವಣೆ ಗಮನಿಸಿದರೆ ಸಾಮಾನ್ಯ ಜನರು ಮನಸ್ಸು ಮಾಡಿದರೆ ಬದಲಾವಣೆ ತರಬಹುದೆಂಬುದನ್ನು ಅರಿಯಬಹುದೆಂದ ಸ್ವಾಮೀಜಿ, ಒಳಿತನ್ನು ಗುರುತಿಸುವ ಕಣ್ಣು ಕಳೆದುಕೊಳ್ಳಬಾರದೆಂದರು. ಜಿಪಂ ಮಾಜಿ ಸದಸ್ಯ ಮರುಳಪ್ಪ, ಕಡೂರು ಪಿಸಿಎಆರ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕಲ್ಮುರಡಪ್ಪ ಮತ್ತು ರಾಮಜ್ಜ, ಮಾಜಿ ಪ್ರಧಾನ ಮಲ್ಲೇನಿಂಗಪ್ಪ, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮೂಡಿಗೆರೆಯ ಎಸ್. ವೆಂಕಟರಾಮ್, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement