ಆಕಸ್ಮಿಕ ಬೆಂಕಿ: 3 ಗುಡಿಸಲು ಭಸ್ಮ
ತರೀಕೆರೆ: ಬುಕ್ಕಾಂಬುದಿ ಸಮೀಪದ ಹೊಸ ಬಡಾವಣೆ ಬಳಿ ಗುರುವಾರ ಸಂಜೆ 4 ಗಂಟೆಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ 3 ಗುಡಿಸಲುಗಳು ಭಸ್ಮವಾಗಿವೆ.
ಗುಡಿಸಲುನಲ್ಲಿ ಇದ್ದ ಪದಾರ್ಥಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿದ ಕೂಡಲೇ ಹೊಸದುರ್ಗದಿಂದ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ತರೀಕೆರೆ ಡಿವೈಎಸ್ಪಿ ಚಿದಾನಂದಸ್ವಾಮಿ, ಅಜ್ಜಂಪುರ ಪಿಎಸ್‌ಐ ಲಿಂಗರಾಜು, ಶಿವನಿ ಪೊಲೀಸ್ ದಪೇದಾರ್ ಕರಿಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಬೆಂಕಿ ಅನಾಹುತ: 2 ಮನೆ ಧ್ವಂಸ
ತರೀಕೆರೆ: ಸಮೀಪದ ಸೀತಾಪುರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 11 ರ ಸಮಯದಲ್ಲಿ ವೇದಾವತಿ ಹಾಗು ರತ್ನಮ್ಮ ಚಂದ್ರಪ್ಪ ಎನ್ನುವವರಿಗೆ ಸೇರಿದ ಎರಡು ಮನೆಗಳಿಗೆ ಅಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿವೆ.
ಬೆಂಕಿಯಿಂದಾಗಿ ಮನೆಯಲ್ಲಿದ್ದ ಧವಸ ದಾನ್ಯ ಪಾತ್ರೆ ಮತ್ತಿತರ ಪದಾರ್ಥಗಳು ಸುಟ್ಟು ಅಪಾರ ನಷ್ಟವಾಗಿದೆ.
ಸುದ್ದಿ ತಿಳಿದ ಕೂಡಲೇ ತರೀಕೆರೆಯಿಂದ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದರು.