ಮಾರಾಟ ಮಳಿಗೆ ತೆರೆಯಲು ಅವಕಾಶ
ಕ.ಪ್ರ.ವಾರ್ತೆ, ಕಡೂರು ಜ. 9
ಜ.14 ಮತು 15ರಂದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 2 ದಿನಗಳ ಕಾಲ ನಡೆಯಲಿರುವ ಶ್ರೀಗುರುಸಿದ್ದರಾಮ ಜಯಂತ್ಯುತ್ಸವದಲ್ಲಿ ವರ್ತಕರು, ಸಂಘ, ಸಂಸ್ಥೆಗಳು ಹಾಗೂ ಪ್ರದರ್ಶನ ನಡೆಸುವವರು ಸಮಿತಿಯ ಅನುಮತಿ ಪಡೆದು ಪ್ರದರ್ಶನ ಮಳಿಗೆ ತೆರೆಯಬಹುದು ಎಂದು ಪದಾಧಿಕಾರಿಗಳಾದ ಬಿ.ರಾಜು, ಸಿ.ಎನ್. ಕಲ್ಲೇಶಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ 2014ನೇ ಸಾಲಿನ 841ನೇ ಶ್ರೀಸಿದ್ದರಾಮ ಜಯಂತಿಯು ಎಪಿಎಂಸಿ ಪ್ರಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಜಯಂತಿಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಸೇರಲಿದ್ದಾರೆ.
ಉತ್ಸವದಲ್ಲಿ 100 ಪ್ರದರ್ಶನಾ ಮಳಿಗೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳು ಮತ್ತು ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಇಚ್ಛೆ ಉಳ್ಳವರು ಸಮಿತಿಯವರನ್ನು ಸಂಪರ್ಕಿಸಿ ಮೊದಲೇ ತಮ್ಮ ಮಳಿಗೆಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಮಳಿಗೆ ಪಡೆಯಲು ಇಚ್ಛಿಸುವವರು ಎನ್.ಕಲ್ಲೇಶ್, ಸಹಾಯಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ 9686660991 ಮತ್ತು ಕಚೇರಿಯ 08267-214403ಗೆ ಸಂಪರ್ಕಿಸಿ ಮಾಹಿತಿ ಪಡೆದು ನೋಂದಾಯಿಸಿಕೊಳ್ಳಬಹುದು ಎಂದು ಸಮಿತಿ ತಿಳಿಸಿದೆ.