ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ

Lingaraj Badiger
Updated On : 10 Jan 2014, 12:21 pm

ಕ.ಪ್ರ.ವಾರ್ತೆ, ತರೀಕೆರೆ, ಜ. 9
ತಾಲೂಕಿನ ಅಜ್ಜಂಪುರ ಮತ್ತು ಶಿವನಿ ಹೋಬಳಿಯ ಭಾಗದಲ್ಲಿ ದುಸ್ಥಿತಿಯಲ್ಲಿರುವ ಮುಖ್ಯ ರಸ್ತೆಗಳ ಕಾಮಗಾರಿ ನಡೆಯದೆ ನೆನೆಗುದಿಗೆ ಬಿದ್ದಿರುವ ಕಾರಣ, ಕೂಡಲೇ ಗಮನಹರಿಸಿದ ಶಾಸಕ ಜಿ.ಎಚ್. ಶ್ರೀನಿವಾಸ್ ಹಣ ಮಂಜೂರು ಮಾಡಲು ಒತ್ತಾಯಿಸಿ ಮನವಿ ಮಾಡಿದ್ದಾರೆ ಎಂದು ಗಡೀಹಳ್ಳಿ ಬೀರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಜಿ.ಬಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಹೆಸರಾಂತ ಬೀರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಎಸ್.ಸಿದ್ದಾರಾಮಯ್ಯ ಅವರನ್ನು ಆಹ್ವಾನಿಸಲು ತೆರಳಿದ್ದಾಗ ಈ ಸಂದರ್ಭ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪಿಡಬ್ಲೂಡಿ ಸಚಿವರಾದ ಎಸ್.ಸಿ. ಮಹದೇವಪ್ಪ ಅವರು ಮನವಿ ಪರಿಶೀಲಿಸಿ ಕೂಡಲೇ 50/54 ಈ ( ಎಸ್.ಎಚ್) ಯೋಜನೆಯಡಿ ತಮ್ಮಟಹಳ್ಳ ಮುಖ್ಯ ರಸ್ತೆಯಿಂದ ಶಿವನಿ ರೇಲ್ವೆ ನಿಲ್ದಾಣದವರೆಗೆ 9 ಕಿ.ಮೀ.ರಸ್ತೆಗೆ 6 ಕೋಟಿ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
ಶಾಸಕ ಜಿ.ಎಚ್. ಶ್ರೀನಿವಾಸ್ ಅವರೊಂದಿಗೆ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ತಿಪ್ಪೇರುದ್ರಯ್ಯ ಅವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement