ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ
ಮೂಡಿಗೆರೆ: ತಾಲೂಕಿನ ಕುಂಬರಡಿ ಗ್ರಾಮದ ಸುರಕ್ಷ ಕೆ.ಎಸ್. ಅವರು ಇತ್ತೀಚೆಗೆ ಗುಜಾರಾತಿನ ಅಜ್ಮೀರದಲ್ಲಿ ನಡೆದ ವಿದ್ಯಾರ್ಥಿಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಪ್ರಥಮ, 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸುರಕ್ಷ ಕೆ.ಎಸ್. ತಾಲೂಕಿನ ಕುಂಬರಡಿ ಗ್ರಾಮದ ರೈತ ಕೆ.ಎಸ್. ಶ್ರೀಧರ್ ಮತ್ತು ಜಯಲಕ್ಷ್ಮೀ ಅವರ ಪುತ್ರಿಯಾಗಿದ್ದಾರೆ.